ಬೆಂಗಳೂರು:
ಬಿಬಿಎಂಪಿಯ ಹಾಲಿ ಮೇಯರ್ ಮತ್ತು ಉಪ ಮೇಯರ್ ಅಧಿಕಾರಾವಧಿ ಮುಗಿಯುತ್ತಾ ಬರುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳ ( ಸೆಪ್ಟೆಂಬರ್) ಅಂತ್ಯದಲ್ಲಿ ಚುನಾವಣೆ ನಡೆಯಲಿದೆ.
ಹಾಲಿ ಮೇಯರ್ ಗಂಗಾಂಬಿಕೆ ಹಾಗೂ ಉಪಮೇಯರ್ ಭದ್ರೇಗೌಡ ಅವರ ಅಧಿಕಾರಾವಧಿ ಸೆಪ್ಟಂಬರ್ 28ಕ್ಕೆ ಮುಗಿಯಲಿದೆ. ಬಿಬಿಎಂಪಿ ಅಧಿಕಾರಿಗಳು ನೂತನ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಸೆಪ್ಟೆಂಬರ್ 27ಕ್ಕೆ ಚುನಾವಣೆ ನಡೆಯಲಿದ್ದು, ಈ ಸಂಬಂಧ ಇಂದು ಶುಕ್ರವಾರ ಸಂಜೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಬೆಂಗಳೂರು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ತಿಳಿಸಿದರು.
ಈಗಾಗಲೇ ಚುನಾವಣೆಗೆ ಮತದಾರ ಪಟ್ಟಿಯನ್ನೂ ಸಿದ್ಧಗೊಂಡಿದೆ. ಆ ಪ್ರಕಾರ, ಈ ಬಾರಿಯ ಚುನಾವಣೆಗೆ ಒಟ್ಟು 257 ಮತದಾರರಿದ್ದು, ಯಾವುದೇ ಪಕ್ಷ ಗೆಲ್ಲಲು 128 ಮತಗಳ ಮ್ಯಾಜಿಕ್ ನಂಬರ್ ಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
