ಬೆಂಗಳೂರು :
ಹೊಸ ವರ್ಷ ಪ್ರಾರಂಭದಿಂದ ರಾಜಧಾನಿ ಬೆಂಗಳೂರಿನ ಜನರು ಬಿಬಿಎಂಪಿಗೆ ಕಸ ನಿರ್ವಹಣೆ ಶುಲ್ಕವನ್ನು ಪಾವತಿ ಮಾಡಬೇಕಿದೆ.
ಹೌದು.. ಬಿಬಿಎಂಪಿಯಿಂದ ಈಗ ಕಸದಿಂದಲೂ ಕಾಸು ಮಾಡೋ ಮೆಗಾ ಪ್ಲಾನ್ ರೆಡಿ ಮಾಡಿದ್ದು, ಬೆಂಗಳೂರಲ್ಲಿ ಇನ್ಮುಂದೆ ಕಸ ಹಾಕೋಕು ಕಾಸು ಕೊಡ್ಬೇಕಾಗುತ್ತದೆ.
ಪ್ರತಿ ಮನೆಗೆ ತಿಂಗಳಿಗೆ ರೂ.200 ಕಸದ ಶುಲ್ಕ ನಿಗದಿ ಪಡಿಸಲಾಗುತ್ತಿದೆ. ಕಸಕ್ಕೆ ಗರಿಷ್ಠ ಶುಲ್ಕ 14 ಸಾವಿರ ರೂಪಾಯಿ ಕಟ್ಟಬೇಕು. ಈ ನಿಯಮ ಜನವರಿ.1, 2020ರಿಂದ ಕಸಕ್ಕೆ ಶುಲ್ಕ ಶುರುವಾಗಲಿದೆ.
ಶುಲ್ಕ ವಿವರ :
- ವಸತಿ ಕಟ್ಟಡದ 1000 ಚದರಡಿಗೆ 10 ರೂಪಾಯಿ
- ವಸತಿ ಕಟ್ಟಡದ 1001 ರಿಂದ 3000 ಚದರಡಿಗೆ 30 ರೂಪಾಯಿ
- ವಸತಿ ಕಟ್ಟಡದ 3000ಕ್ಕೂ ಮೇಲ್ಪಟ್ಟ ಚದರಡಿಗೆ 50 ರೂಪಾಯಿ
- ವಾಣಿಜ್ಯ ಕಟ್ಟಡದ 1000 ಚದರಡಿಗೆ 50 ರೂಪಾಯಿ
- ವಾಣಿಜ್ಯ ಕಟ್ಟಡದ 1001 ರಿಂದ 5000 ಚದರಡಿಗೆ 100 ರೂಪಾಯಿ
- ವಾಣಿಜ್ಯ ಕಟ್ಟಡದ 5000ಕ್ಕೂ ಮೇಲ್ಪಟ್ಟ ಚದರಡಿಗೆ 200 ರೂಪಾಯಿ
- ಕೈಗಾರಿಕಾ ಕಟ್ಟಡದ 1000 ಚದರಡಿಗೆ 50 ರೂಪಾಯಿ
- ಕೈಗಾರಿಕಾ ಕಟ್ಟಡದ 1001ರಿಂದ 5000 ಚದರಡಿಗೆ 200 ರೂಪಾಯಿ
- ಕೈಗಾರಿಕಾ ಕಟ್ಟಡದ 5000ಕ್ಕೂ ಮೇಲ್ಪಟ್ಟ ಚದರಡಿಗೆ 300 ರೂಪಾಯಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ