ಬೆಂಗಳೂರು:
ಕೊರೊನಾ ನಿಯಮ ಪಾಲಿಸದ 7 ಖಾಸಗಿ ಆಸ್ಪತ್ರೆಗಳ ವಿರುದ್ಧ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.
ನಗರದಲ್ಲಿರುವ ಆಸ್ಪತ್ರೆಗಳಿಗೆ ಕೊರೊನಾ ಚಿಕಿತ್ಸೆ ಸಂಬಂಧ ರಾಜ್ಯ ಸರಕಾರ ಕೆಲವೊಂದು ನಿರ್ದೇಶನಗಳನ್ನ ನೀಡಿದ್ದು, ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಪ್ರತಿ ವಿಭಾಗದಲ್ಲಿ 50% ಹಾಸಿಗೆಗಳನ್ನ ಖಾಸಗಿ ಆಸ್ಪತ್ರೆಗಳು ಕಾಯ್ದಿರಿಸಬೇಕಿದೆ ಎಂದು ಆದೇಶ ನೀಡಿತ್ತು.
ಆದರೆ, ಈ ನಿಯಮಗಳನ್ನ ಗಾಳಿಗೆ ತೂರಿದ ಹಿನ್ನೆಲೆಯಲ್ಲಿ ನಗರದ ರಂಗದೊರೈ ಮೆಮೊರಿಯಲ್ ಆಸ್ಪತ್ರೆ, ಸಂಜಿವಿನಿ ಆಸ್ಪತ್ರೆ, ಡಾ. ಜಿವಿಜಿ ಹೆಲ್ತ್ ಕೇರ್ ಪ್ರೈವೆಟ್ ಲಿ., ಶ್ರೀನಿವಾಸ್ ಆಸ್ಪತ್ರೆ, ಮೆಡ್ ಸ್ಟಾರ್ ಆಸ್ಪತ್ರೆ, ನಂದನ ಹೆಲ್ತ್ ಕೇರ್ ಸರ್ವಿಸ್ ಇಂಡಿಯಾ ಲಿಮಿಟೆಡ್ ಆಸ್ಪತ್ರೆಗಳಿಗೆ ಬಿಬಿಎಂಪಿ ಶೋಕಾಸ್ ನೋಟಿಸ್ ನೀಡಲಾಗಿದೆ.
ಸಾರ್ವಜನಿಕರು ಈ ಆಸ್ಪತ್ರೆಗಳ ವಿರುದ್ಧ ಪಾಲಿಕೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ 7 ಪ್ರತಿಷ್ಠಿತ ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಲೈಸನ್ಸ್ ಯಾಕೆ ರದ್ದು ಮಾಡಬಾರದು ಎಂದು ಬಿಬಿಎಂಪಿ ಕೇಳಿದ್ದು, ಮುಂದಿನ 24 ಗಂಟೆಯಲ್ಲಿ ಈ ನೋಟಿಸ್‍ಗೆ ಉತ್ತರಿಸಬೇಕಿದೆ.
ಬಿಬಿಎಂಪಿ, ಆಸ್ಪತ್ರೆಗಳ ಓಪಿಡಿ ಕ್ಲೋಸ್ ಮಾಡಿ, ಒಳರೋಗಿಗಳನ್ನು ಶಿಫ್ಟ್ ಮಾಡುವ ಎಚ್ಚರಿಕೆಯನ್ನ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ