ದೆಹಲಿ:
ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತದ 15 ಜನರ ತಂಡವನ್ನು ಏ. 15ರಂದು ಮುಂಬೈನಲ್ಲಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಸೋಮವಾರ ತಿಳಿಸಿದೆ.
ಏ.23ರ ಒಳಗೆ ಐಸಿಸಿಗೆ 15 ಸದಸ್ಯರ ತಂಡದ ಪಟ್ಟಿ ನೀಡಬೇಕು. ಅಲ್ಲದೆ, 15 ಮಂದಿ ಆಟಗಾರರ ಪಟ್ಟಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ಟೂರ್ನಿ ಆರಂಭಕ್ಕೂ 7 ದಿನಗಳ ಮೊದಲು ಮಾಡಿಕೊಳ್ಳಲು ಅವಕಾಶಗಳಿವೆ. ಸದ್ಯ ಐಪಿಎಲ್ ಟೂರ್ನಿ ನಡುವೆಯೇ ತಂಡ ಪ್ರಕಟಿಸಲು ಐಸಿಸಿಐ ಮುಂದಾಗಿದೆ.
The Indian cricket team for World Cup 2019 to be announced on 15 April in Mumbai. pic.twitter.com/wletiBXAWw
— ANI (@ANI) April 8, 2019
ಟೀಂ ಇಂಡಿಯಾದ ವಿಶ್ವಕಪ್ ತಂಡ ಬಹುತೇಕ ಅಂತಿಮಗೊಂಡಿದೆ. ಆದರೆ ನಾಲ್ಕನೇ ಕ್ರಮಾಂಕಕ್ಕೆ ಯಾರನ್ನು ಆಯ್ಕೆ ಮಾಡಬೇಕು ಅನ್ನೋ ಗೊಂದಲ ಆಯ್ಕೆ ಸಮಿತಿಯಲ್ಲಿತ್ತು. ಹೀಗಾಗಿ ತಂಡದ ಆಯ್ಕೆ ವಿಳಂಭವಾಗಿತ್ತು. ಇದೀಗ ಏ.15ರಂದು ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಅಂತಿಮ ಆಯ್ಕೆ ನಡೆಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
