ಪಾವಗಡ :
ಇಂದು ಬೆಳ್ಳಂಬೆಳಗ್ಗೆ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸಾಸಲುಕುಂಟೆ ಗ್ರಾಮದಲ್ಲಿ ನಡೆದಿದೆ.
ವೀರಾಂಜನೇಯ(55) ಸಾವನ್ನಪ್ಪಿರುವ ರೈತ. ಈತ ಇಂದು ಬೆಳಗ್ಗೆ 6.30 ರ ಸಮಯದಲ್ಲಿ ಅರಣ್ಯದ ಪಕ್ಕದಲ್ಲಿರುವ ತನ್ನ ಜಮೀನಿಗೆ ಹಾದುಹೋಗುವಾಗ ಕರಡಿ ದಾಳಿ ನಡೆಸಿದ್ದು, ದಾಳಿಯ ತೀವ್ರತೆಗೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಇನ್ನು ರೈತರಾದ ಶಿವಪ್ಪ ರೆಡ್ಡಿ, ನರಸಿಂಹರೆಡ್ಡಿ, ಗೋಪಾಲ್ ರೆಡ್ಡಿ, ಯರ್ರಪ್ಪ ಎಂಬುವವರ ಮೇಲೂ ಕರಡಿ ದಾಳಿ ನಡೆದಿದ್ದು, ಅವರಿಗೆ ತೀವ್ರ ಗಾಯಗಳಾಗಿವೆ. ಸದ್ಯ ಅವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ