ಚಿಕನ್ ವ್ಯಾಪಾರಸ್ಥೆ ಸಾವು ; ಚಿಕನ್ ತಿಂದ ಗ್ರಾಹಕರಲ್ಲಿ ಆತಂಕ!

ಬೆಳಗಾವಿ :

     ಚಿಕನ್ ಮಾರಾಟ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿದ್ದು, ಸದ್ಯ ಗ್ರಾಹಕರಲ್ಲಿ ಕೊರೊನಾ ಆತಂಕ ಮನೆ ಮಾಡಿದೆ. 

      ನಗರದ ಹುಕ್ಕೇರಿಯ ಮಾಂಸ ಮಾರುಕಟ್ಟೆಯಲ್ಲಿ ಚಿಕನ್ ಅಂಗಡಿಯನ್ನು ಹೊಂದಿದ್ದಂತ ಮಹಿಳೆಯೊಬ್ಬರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇಂತಹ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.

     ಮಹಿಳೆಯನ್ನು ಪರೀಕ್ಷಿಸಿದ ಸಂಕೇಶ್ವರ ಪಟ್ಟಣದ ಖಾಸಗಿ ವೈದ್ಯ ಹಾಗೂ ಮಹಿಳೆಯ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿದೆ.

     ಕೊರೋನಾ ಸೋಂಕಿನ ಲಕ್ಷಣಗಳಿದ್ದೂ, ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟುವ ಮೊದಲು ಅನೇಕರಿಗೆ ಚಿಕನ್ ಮಾರಾಟ ಮಾಡಿದ್ದರು. ಇದೀಗ ಕೊರೋನಾ ಸೋಂಕು ದೃಢಪಟ್ಟದ್ದಂತ ಮಹಿಳೆ ಸಾವನ್ನಪ್ಪಿದ್ದಾರೆ. ಹೀಗಾಗಿ  ಅಂಗಡಿಯಿಂದ ಚಿಕನ್ ಖರೀದಿಸಿದ್ದಂತ ಗ್ರಾಹಕರಿಗೂ ಕೊರೋನಾ ಸೋಂಕಿನ ಭೀತಿ ಎದುರಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap