ಬಳ್ಳಾರಿ :
ಎತ್ತಿನ ಬಂಡಿಗೆ ಬೈಕ್ ಡಿಕ್ಕಿಯಾಗಿ ದಂಪತಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಟ್ಟೂರು ತಾಲೂಕಿನ ಬೆನಕನಹಳ್ಳಿ ಬಳಿ ಬೆಳಗಿನ ಜಾವ 6ಗಂಟೆಗೆ ಸಂಭವಿಸಿದೆ.
ನಿವೇದಿತಾ(23), ಶಿವಕುಮಾರ್(34) ಮೃತ ದುರ್ದೈವಿಗಳು. ಇವರಿಬ್ಬರೂ ಇತ್ತೀಚಿಗಷ್ಟೇ ಮದುವೆ ಆಗಿದ್ದರು. ಇವರಿಬ್ಬರೂ ನಿವೇದಿತಾರ ತವರು ಮನೆಯಾದ ಜಗಳೂರು ತಾಲ್ಲೂಕಿನ ಹೊಸಕೆರೆಯಿಂದ ಶಿವಕುಮಾರ್ ಅವರ ಸ್ವಗ್ರಾಮ ಸಂಡೂರಿಗೆ ಹೊರಟಿದ್ದರು.
ದಂಪತಿ ಹೊರಟ್ಟಿದ್ದ ಬೈಕ್ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಗಾಡಿಯ ಮುಂಬಾಗದ ಕಬ್ಬಿಣದ ಸಲಕೆ (ಮೋಕು) ಇಬ್ಬರಿಗೂ ಎದೆಗೆ ಹೊಕ್ಕಿದೆ. ತೀವ್ರವಾಗಿ ಗಾಯಗೊಂಡ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ