ಬೆಂಗಳೂರು :
ಪೊಲೀಸರು ಸೋಂಕು ತಗುಲಿದ ಆರೋಪಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಇಂದು ನಗರದ 10 ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕೊರೊನಾ ವೈರಸ್ ಭೀತಿಯಿಂದ ಈ ಹಿಂದೆ 12 ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ಜೀವನ್ ಭೀಮಾ ನಗರ, ಜೆ.ಜೆ.ನಗರ, ಹೆಣ್ಣೂರು, ಜಯನಗರ, ಹೆಬ್ಬಗೋಡಿ, ಸೋಲದೇವನಹಳ್ಳಿ, ಸಿಟಿ ಮಾರ್ಕೆಟ್, ಬೈಯ್ಯಪ್ಪನಹಳ್ಳಿ ಠಾಣೆಗಳನ್ನು ಬಂದ್ ಮಾಡಲಾಗಿತ್ತು.
ಇಂದು ಮತ್ತೆ ಕೊರೊನಾ ವೈರಸ್ ಭೀತಿಯಿಂದಾಗಿ ಬೆಂಗಳೂರಿನ ಕಲಾಸಿಪಾಳ್ಯ, ಸಿಟಿ ಮಾರ್ಕೆಟ್, ಮಾರತ್ ಹಳ್ಳಿ, ಕಬ್ಬನ್ ಪಾರ್ಕ್, ಎಸ್.ಆರ್.ನಗರ, ವಿವಿಪುರಂ ಸಂಚಾರಿ ಪೊಲೀಸ್ ಠಾಣೆ, ಅಶೋಕ್ ನಗರ ಸಂಚಾರಿ ಠಾಣೆ, ವಿಲ್ಸನ್ ಗಾರ್ಡನ್, ಸಿಸಿಬಿ ಕಚೇರಿಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಮಾರಕ ಕೊರೋನಾ ವೈರಸ್ ಪೊಲೀಸರನ್ನೂ ಇನ್ನಿಲ್ಲದಂತೆ ಕಾಡುತ್ತಿದ್ದು, ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ