ಬೆಂಗಳೂರು:
ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಗುಪ್ತಚರ ವಿಭಾಗದ ಎಡಿಜಿಪಿ ಕಮಲ್ ಪಂತ್ ಅವರು ಶನಿವಾರ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.
ಶುಕ್ರವಾರ ಸಂಜೆಯೇ ನೂತನ ಕಮಿಷನರ್ ಅಧಿಕಾರ ಸ್ವೀಕರಿಸುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಕಮಿಷನರ್ ಕಚೇರಿಯಲ್ಲಿ ಸಕಲ ಸಿದ್ಧತೆಗಳೂ ನಡೆದಿದ್ದವು. ಆದರೆ ಕೊನೇ ಗಳಿಗೆಯಲ್ಲಿ ಅಧಿಕಾರ ಹಸ್ತಾಂತರ ಶನಿವಾರಕ್ಕೆ ಮುಂದೂಡಲ್ಪಟ್ಟಿತು.
ಇಂದು ಬೆಳಗ್ಗೆ 11 ಗಂಟೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು, ಭಾಸ್ಕರ್ ರಾವ್ ಅವರು ಕಮಲ್ ಪಂಥ್ ಅವರಿಗೆ ಬ್ಯಾಟನ್ ನೀಡುವ ಮೂಲಕ ಭಾಸ್ಕರ್ ರಾವ್ ಅವರು ನೂತನ ಕಮಿಷನರ್ ಅಧಿಕಾರ ಹಸ್ತಾಂತರಿಸಿದರು.
Today, Sri. Kamal Pant, IPS took charge as Commissioner of Police, Bengaluru City. @CPBlr pic.twitter.com/Kyha6JXAl4
— BengaluruCityPolice (@BlrCityPolice) August 1, 2020
1990ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಕಮಲ್‌ಪಂತ್ ಮೂಲತಃ ಉತ್ತರಾಖಂಡ್ನ ಪಿತೋರ್ ಗಢ್ನವರು. ಭೂಗೋಳಶಾಸ್ತ್ರದಲ್ಲಿ ಎಂಎಸ್ ಸಿ ಪದವಿ ಪಡೆದಿರುವ ಕಮಲ್‌ಪಂತ್ 1990ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು.
ಕಲಬುರಗಿಯಲ್ಲಿ ಪ್ರೊಬೇಷನರಿ ಎಎಸ್ಪಿ ಯಾಗಿ ಕೆಲಸ ಶುರು ಮಾಡಿದ ಕಮಲ್ ಪಂತ್, ನಂತರ ಶಿವಮೊಗ್ಗದ ಭದ್ರಾವತಿಯಲ್ಲಿ ಎಎಸ್ಪಿಯಾಗಿ ಸೇವೆ ಸಲ್ಲಿಸಿದರು. ನಂತರ ಶಿವಮೊಗ್ಗ ಹಾಗೂ ಮಂಗಳೂರಲ್ಲಿ ಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದರು.
ಬಳಿಕ ಕೇಂದ್ರ ಐಜಿಪಿಯಾಗಿ ಪಂತ್ಗೆ ಬಡ್ತಿ ದೊರಕಿತು. ನಂತರ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಆನಂತರ ಕಾನೂನು ಸುವ್ಯವಸ್ಥೆ ಹಾಗೂ ಆಂತರಿಕ ಭದ್ರತಾ ಇಲಾಖೆಯ ಎಡಿಜಿಪಿ ಆಗಿ ಕಾರ್ಯನಿರ್ವಹಿಸಿ
ಭಾಸ್ಕರ್ ರಾವ್ ಮತ್ತು ಕಮಲ್ ಪಂತ್ ಒಂದೇ ಬ್ಯಾಚಿನ ಅಧಿಕಾರಿಗಳಾಗಿರುವುದು ಮಾತ್ರವಲ್ಲದೆ ಇಬ್ಬರೂ ಆಪ್ತ ಸ್ನೇಹಿತರಾಗಿದ್ದಾರೆ. ಬೆಂಗಳೂರು ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕನ್ನಾಗಿ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ