ಬೆಂಗಳೂರು:
ಐಎಂಎ (ಐ ಮಾನಿಟರಿ ಅಡ್ವೈಸರಿ) ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಶುಕ್ರವಾರ 209 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ (ಲೇವಾದೇವಿ) ವ್ಯವಹಾರ ತಡೆ ಕಾಯ್ದೆ ಅಡಿಯಲ್ಲಿ ಐಎಂಎ ಜ್ಯುವೆಲ್ಸ್ ಸಂಸ್ಥೆಯ 197 ಕೋಟಿ ರೂ ಮೌಲ್ಯದ ಸೊತ್ತುಗಳು ಮತ್ತು 12 ಕೋಟಿ ರೂ ಬ್ಯಾಂಕ್ ಠೇವಣಿಗಳನ್ನು ಬೆಂಗಳೂರಿನ ಪ್ರಾದೇಶಿಕ ಕಚೇರಿ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇ.ಡಿ ಪ್ರಧಾನ ಕಚೇರಿ ನವದೆಹಲಿಯಲ್ಲಿ ತಿಳಿಸಿದೆ. ಒಟ್ಟಾರೆ ಜಪ್ತಿ ಹಾಕಿಕೊಂಡಿರುವ ಸೊತ್ತಿನ ಮೌಲ್ಯ 209 ಕೋಟಿ ರೂಪಾಯಿಗಳು ಎಂದು ಇ.ಡಿ ಪ್ರಕಟಣೆ ತಿಳಿಸಿದೆ.
ಐಎಂಎ ಸಂಸ್ಥೆಯ ಪ್ರವರ್ತಕ ಹಾಗೂ ಆಡಳಿತ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಹೂಡಿಕದಾರರಿಗೆ 40,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸಿ ತಲೆಮರೆಸಿಕೊಂಡ ಬಳಿಕ ಆತನ ವಿರುದ್ಧ ಇ.ಡಿ ಮನಿ ಲ್ಯಾಂಡರಿಂಗ್ ಕಾಯಿದೆಯಡಿ ಕ್ರಿಮಿನಲ್ ಕೇಸು ದಾಖಲಿಸಿಕೊಂಡಿತ್ತು.
ಇನ್ನು ಕರ್ನಾಟಕ ಸರಕಾರದಿಂದ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚನೆ ಮಾಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
