ಮೆಟ್ರೋ ಟಿಕೆಟ್ ಇನ್ನು ಮೊಬೈಲ್ ನಲ್ಲೇ ಲಭ್ಯ

ಬೆಂಗಳೂರು :

      ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ, ಇನ್ಮುಂದೆ ನಮ್ಮ ಮೆಟ್ರೋ ರೈಲು ಟಿಕೆಟ್ ಗಳನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲೇ ಬುಕ್ ಮಾಡಬಹುದು.

      ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ಗಳನ್ನು ಪರಿಚಯಿಸಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದ್ದು, ಪ್ರಯಾಣಿಕರು ಮೊಬೈಲ್ ಆ್ಯಪ್‌ ಬಳಸಿ ಹೊರಡುವ ಸ್ಥಳ, ತಲುಪುವ ಸ್ಥಳ, ಪ್ರಯಾಣಿಕರ ಸಂಖ್ಯೆಯನ್ನು ಭರ್ತಿ ಮಾಡಿ ಟಿಕೆಟ್‌ ಪಡೆಯಬಹುದು.

      ಆ್ಯಪ್‌ ನಲ್ಲಿ ಕ್ಯೂಆರ್‌ ಕೋಡ್‌ ಕಾಣಿಸುತ್ತದೆ. ಅದನ್ನು ಮೆಟ್ರೋ ನಿಲ್ದಾಣಗಳ ಕ್ಯೂಆರ್‌ ಎನೇಬಲ್ಡ್‌ ಸ್ವಯಂಚಾಲಿತ ಫೇರ್‌ ಕಲೆಕ್ಷನ್‌ ಗೇಟುಗಳಲ್ಲಿ ಪ್ರದರ್ಶಿಸಬಹುದು. ಇದು ಜಾರಿಯಾದಲ್ಲಿ ಪ್ರಯಾಣಿಕರು ಪ್ಲಾಸ್ಟಿಕ್‌ ಸ್ಮಾರ್ಟ್‌ ಕಾರ್ಡ್‌ಗಳನ್ನು ಒಯ್ಯುವ ಅಥವಾ ಟಿಕೆಟ್‌ ರೀಚಾರ್ಜ್‌ಗಾಗಿ, ಟೋಕನ್‌ಗಳ ಖರೀದಿಗಾಗಿ ಉದ್ದನೆಯ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ. 

      ‘ಈಗಿರುವ ವ್ಯವಸ್ಥೆಯನ್ನು ವರ್ಷದೊಳಗೆ ಮೇಲ್ದರ್ಜೆಗೇರಿಸುತ್ತೇವೆ. ಇದರಿಂದ ಪ್ತಯಾಣಿಕರು ಸ್ಮಾರ್ಟ್‌ಫೋನ್ ಮೂಲಕವೇ ಟಿಕೆಟ್‌ ಖರೀದಿಸಲು ನೆರವಾಗಲಿದೆ’ ಎಂದು ಬಿಎಂಆರ್‌ಸಿಎಲ್‌ ಆಡಳಿತ ನಿರ್ದೇಶಕ ಅಜಯ್ ಸೇಥ್ ತಿಳಿಸಿದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap