ಚಿಕ್ಕಮಗಳೂರು:
ಕಾಡುಕುರಿಯೊಂದನ್ನು ನುಂಗಿ ಕಾಫಿ ತೋಟದಲ್ಲಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಸೆರೆಹಿಡಿದ ಘಟನೆ ಕೊಪ್ಪ ತಾಲೂಕಿನ ವಗಳೆ ಎಂಬಲ್ಲಿ ನಡೆದಿದೆ.
ವಗಳೆ ನಾಗರಾಜ್ ಎಂಬವರ ಕಾಫಿ ತೋಟದಲ್ಲಿ ಸುಮಾರು 75 ಕೆ.ಜಿ. ತೂಕವಿದ್ದ ಹೆಬ್ಬಾವು ಕಾಡುಕುರಿಯೊಂದನ್ನು ನುಂಗಿ ಮಲಗಿತ್ತು. ಈ ಬೃಹತ್ ಹೆಬ್ಬಾವನ್ನು ಕಂಡುಬೆಚ್ಚಿ ಬಿದ್ದ ಸ್ಥಳೀಯರು ಉರಗ ತಜ್ಞ ಹರೀಂದ್ರರಿಗೆ ಮಾಹಿತಿ ನೀಡಿದರು.
ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಸುಮಾರು ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಅರಣ್ಯ ಅಧಿಕಾರಿಗಳ ಸಹಕಾರದಿಂದ ಹೆಬ್ಬಾವನ್ನು ಹರೀಂದ್ರ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ನಂತರ ಉರಗ ತಜ್ಞ ಹರೀಂದ್ರಾ ಅವರು ಸೆರೆ ಹಿಡಿದ ಹೆಬ್ಬಾವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ