‘ಬಿಪಿಎಲ್’ ಕಾರ್ಡ್ ದಾರರಿಗೆ ಬಿಗ್ ಶಾಕಿಂಗ್ ನ್ಯೂಸ್!!!

ಬೆಂಗಳೂರು:

       ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ವೈದ್ಯಕೀಯ ಮಂಡಳಿ ಶಾಕಿಂಗ್ ನ್ಯೂಸ್ ನೀಡಿದ್ದು, ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಶುಲ್ಕ ಪಾವತಿ ಕಡ್ಡಾಯಗೊಳಿಸಲಾಗಿದೆ.

       ಬಿಪಿಎಲ್ ಕಾರ್ಡ್ ದಾರರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ದಾರರು ಚಿಕಿತ್ಸೆ ಪಡೆಯಲು ಶುಲ್ಕ ಪಾವತಿಸಬೇಕು.

      ಶಿವಮೊಗ್ಗ, ಮೈಸೂರು, ಹಾಸನ, ಬೆಂಗಳೂರು ಸೇರಿದಂತೆ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಅಕ್ಟೋಬರ್ 1ರಿಂದಲೇ ಶುಲ್ಕ ಪಾವತಿಸಿ ಚಿಕಿತ್ಸೆ ಪಡೆದುಕೊಳ್ಳುವ ನಿಯಮ ಜಾರಿಯಾಗಿದ್ದು, ಎಪಿಎಲ್ ಕಾರ್ಡ್ ದಾರರು ಚಿಕಿತ್ಸೆ ಪಡೆಯಲು ಪಾವತಿಸುವ ಶುಲ್ಕದ ಅರ್ಧದಷ್ಟು ದರವನ್ನು ಬಿಪಿಎಲ್ ಕಾರ್ಡುದಾರರಿಗೆ ನಿಗದಿ ಮಾಡಲಾಗಿದೆ.

ಯಾವುದಕ್ಕೆ ಎಷ್ಟು ಶುಲ್ಕ??

  1.  ಒಪಿಡಿಗೆ 10 ರೂ. ರಕ್ತ ತಪಾಸಣೆಗೆ 15 ರೂ.ಹಾಸಿಗೆ ಶುಲ್ಕ 25 ರೂ. ಎಕ್ಸರೇ 40 ರೂ. ಮೂತ್ರಪಿಂಡ ತಪಾಸಣೆಗೆ 40 ರೂ. ಲಿವರ್ ತಪಾಸಣೆಗೆ 150 ರೂ.
  2. ಸ್ಪೆಷಲ್ ಬೆಡ್ 750 ರೂ. ನಿಂದ 3,000 ರೂ. ಐಸಿಯು 2,000 ರೂ. ಕಾರ್ಡಿಯಾ ವಿಭಾಗ 30 ರಿಂದ 40 ಸಾವಿರ ರೂ.
  3. ಮೂಳೆ ಚಿಕಿತ್ಸೆ ಹಾಗೂ ಮೊಣಕಾಲು ತಪಾಸಣೆಗೆ 1,000 ರೂ. ನಿಂದ 5,750 ರೂ, ಕಣ್ಣಿನ ತಪಾಸಣೆಗೆ 1000 ರೂ. ನಿಂದ 1,500 ರೂ. ನಿಂದ 7,500 ರೂ.
  4. ಸ್ಪೆಷಲ್ ಬೆಡ್ ಗೆ 750 ರಿಂದ 3 ಸಾವಿರ ರೂಪಾಯಿ, ಕಾರ್ಡಿಯಾ ವಿಭಾಗಕ್ಕೆ 30 ರಿಂದ 40 ಸಾವಿರ ರೂ., ಮೂಳೆ ಚಿಕಿತ್ಸೆ ಮೊಣಕಾಲು ತಪಾಸಣೆಗೆ 1000ದಿಂದ 1500 ರೂ., ಎಂ ಆರ್ ಐ ಸ್ಕ್ಯಾನಿಂಗ್ 500ರಿಂದ 1250 ರೂ. ಹೀಗೆ ವಿವಿಧ ತಪಾಸಣೆಗಳಿಗೆ ಬಿಪಿಎಲ್ ಕಾರ್ಡುದಾರರು ದುಬಾರಿ ಶುಲ್ಕ ನಿಗದಿಪಡಿಸಲಾಗಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap