2 ಬೈಕ್ ಗಳ ಮುಖಾಮುಖಿ : ಮೂವರ ಧಾರುಣ ಸಾವು!!!

ಬಳ್ಳಾರಿ:

      2 ಬೈಕ್​​​ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೂರ್ಲಗುಂದಿ ಕ್ರಾಸ್​​ ಬಳಿ ನಡೆದಿದೆ.

      ನಜೀರಸಾಬ(30), ಪಂಪಾಪತಿ (48) ಮತ್ತು ಅಖಿಲ್​​​​​ (4) ಮೃತ ದುರ್ದೈವಿಗಳು.

      ಗುರುವಾರ ಮಧ್ಯಾಹ್ನ ಅತಿ ವೇಗವಾಗಿ ಬಂದ ಎರಡು ಬೈಕ್​ಗಳು ಡಿಕ್ಕಿಯಾಗಿವೆ. ಘಟನೆಯಲ್ಲಿ ಮೂವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟರೆ, ಓರ್ವ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ನಗರದ ಮಿಮ್ಸ್​​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

      

Recent Articles

spot_img

Related Stories

Share via
Copy link
Powered by Social Snap