ಚಿಕ್ಕಬಳ್ಳಾಪುರ:

ಕೆಎಸ್ಆರ್ಟಿಸಿ ಬಸ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಬಳಿ ನಡೆದಿದೆ.
ಬಾಗೇಪಲ್ಲಿ ತಾಲೂಕಿನ ಸಜ್ಜರವಾರಪಲ್ಲಿ ನಿವಾಸಿ ಸುರೇಂದ್ರ (20) ಮೃತ ವಿದ್ಯಾರ್ಥಿ. ಸುರೇಂದ್ರ ಬೈಕ್ ಮೂಲಕ ಚಿಂತಾಮಣಿ ನಗರದ ಐಟಿಐ ಕಾಲೇಜಿಗೆ ಪ್ರತಿದಿನ ಹೋಗುತ್ತಿದ್ದನು. ಇಂದು ಮೃತ ಸುರೇಂದ್ರ ಅತಿವೇಗದಿಂದ ಬೈಕ್ ಓಡಿಸುತ್ತಿದ್ದನು. ಪರಿಣಾಮ ಚಿಲಕಲನೇರ್ಪು ಬಳಿ ಕೆರೆಯ ಏರಿ ಮೇಲೆ ಎದುರಗಡೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸ್ಥಳದಲ್ಲಿ ಮೃತ ವಿದ್ಯಾರ್ಥಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಾಹಿತಿ ತಿಳಿದು ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬಸ್ ವಶಕ್ಕೆ ಪಡೆದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








