ಚಿತ್ರದುರ್ಗ :
ಮಹಾಘಟ್ ಬಂಧನ್ ಮಾಡಿದವರು ನಾನೇ ಪ್ರಧಾನಿ ಎಂದು ಎಲ್ಲೂ ಹೇಳಿಲ್ಲ. ಎಲ್ಲರೂ ಪ್ರಧಾನಿ ಆಕಾಂಕ್ಷಿಯಾಗಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ವ್ಯಂಗ್ಯ ಮಾಡಿದ್ದಾರೆ.
ಚಿತ್ರದುರ್ಗದ ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕುಟುಂಬ ರಾಜಕಾರಣದವರು ಇಂದು ಮಹಾಘಟ್ಬಂಧನ್ ಅಂತಾ ರೂಪಿಸಿದ್ದಾರೆ. ಮಹಾಘಟ್ಬಂಧನ್ ಮಾಡಿದವರು ನಾನೇ ಪ್ರಧಾನಿ ಅಂತ ಎಲ್ಲೂ ಹೇಳಿಲ್ಲ. ಹೇಳೋಕೆ ಅವರಲ್ಲೇ ಗೊಂದಲವಿದೆ. ಎಲ್ಲರೂ ಪ್ರಧಾನಿ ಆಕಾಂಕ್ಷಿಯಾಗಿದ್ದಾರೆ ಎಂದು ಅಪಹಾಸ್ಯ ಮಾಡಿದರು.
ಅಚ್ಛೇ ದಿನ ಬರಲಿಲ್ಲ ಅಂತ ಹೇಳುತ್ತಾರೆ. ಆದರೆ 6 ಗೊಬ್ಬರ ಕಾರ್ಖಾನೆಗಳನ್ನು ಕಟ್ಟಿಸಿದ್ದು ಅಚ್ಛೆ ದಿನವೇ. ಆಯುಷ್ಮಾನ್ನಿಂದಾಗಿ ಬಡವರಿಗೆ ಅಚ್ಛೆ ದಿನ ಬಂದಿದೆ. ಮಹಾಘಟ್ಬಂಧನ್ ಮಾಡಿದವರ ಯಾವುದೇ ಸಾಧನೆ ಇಲ್ಲ ಎಂದು ಟೀಕೆ ಮಾಡಿದರು.
ಸಾಲ ಮನ್ನಾ ಪ್ರತಿವರ್ಷ ಮಾಡಲೇಬೇಕು. ಆದರೆ ಅವರ ಬೆಳೆಗಳಿಗೆ ಸಪೋರ್ಟ್ ಮಾಡಲು ಮೋದಿ ಮುಂದಾಗಿದ್ದಾರೆ. ಸಾಲ ಮನ್ನಾ ಅನ್ನೋದು ನೆವರ್ ಎಂಡ್ ಬ್ಯುಸಿನೆಸ್ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ