ಹೈದರಾಬಾದ್:
![]()
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿಯನ್ನು ಸಹಿಯನ್ನು ನಕಲು ಮಾಡಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ಮುರಳೀಧರ ರಾವ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಮಹಿಪಾಲ್ ರೆಡ್ಡಿ ಅವರ ಪತ್ನಿ ಟಿ ಪ್ರವರ್ಣಾ ರೆಡ್ಡಿ ನೀಡಿರುವ (41) ದೂರಿನ ಆಧಾರದ ಮೇಲೆ ಮುರಳೀಧರ್ ಸೇರಿದಂತೆ 8 ಮಂದಿ ಮೇಲೆ ಹೈದರಾಬಾದಿನ ಸರೂರ್ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಹೈದರಾಬಾದ್ನ ರಿಯಲ್ ಎಸ್ಟೇಟ್ ಉದ್ಯಮಿ ಮಹಿಪಾಲ್ ರೆಡ್ಡಿಗೆ ಫಾರ್ಮಾ ಎಕ್ಸಿಲ್ ಚೇರ್ಮನ್ ಹುದ್ದೆ ನೀಡುವುದಾಗಿ ಸುಳ್ಳು ಭರವಸೆ ನೀಡಿ ಮುರಳೀಧರ ರಾವ್ ಮತ್ತಿತರ 8 ಮಂದಿ ಆರೋಪಿಗಳು ವಂಚಿಸಿ, 2.17 ಕೋಟಿ ರೂ.ಪಡೆದುಕೊಂಡಿದ್ದರು. ಮಹಿಪಾಲ್ ರೆಡ್ಡಿಯನ್ನು ನೇಮಕ ಮಾಡಿಕೊಂಡಿದ್ದಾಗ ಆದೇಶ ಪತ್ರವನ್ನು ನೀಡಿದ್ದ ಮುರಳೀಧರ ರಾವ್ ಅದರಲ್ಲಿ ನಿರ್ಮಲಾ ಸೀತಾರಾಮನ್ ಸಹಿಯನ್ನು ನಕಲು ಮಾಡಿದ್ದರು. ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ತಾವೇ ನಕಲಿ ನೇಮಕ ಆದೇಶ ಪತ್ರವನ್ನು ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. 
9 ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406( ನಂಬಿಕೆ ದ್ರೋಹ), 420 ( ವಂಚನೆ), 468, 471 (ಫೋರ್ಜರಿ), 506 ( ಕ್ರಿಮಿನಲ್ ಬೆದರಿಕೆ) ಮತ್ತು ಸಿಆರ್ಪಿಯ 156 ಬಿ (ಕ್ರಿಮಿನಲ್ ಪಿತೂರಿ) ಪ್ರಕರಣಗಳನ್ನು ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುರಳೀಧರ್ ರಾವ್, ಈ ಆರೋಪ ಸತ್ಯಕ್ಕೆ ದೂರವಾದುದು. ಈ ಆರೋಪಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








