ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕಾಗಿ ಕೋಟೆನಾಡು ಸಜ್ಜಾಗಿದ್ದು, ಮೋದಿ ಅವರಿಗೂ ಎಂದೂ ಮರೆಯದಂತಹ ಉಡುಗೊರೆ ನೀಡಲು ಚಿತ್ರದುರ್ಗ ಬಿಜೆಪಿ ಘಟಕ ಸಿದ್ಧವಾಗಿದೆ. ನರೇಂದ್ರ ಮೋದಿ ಅವರಿಗೆ ಬಿಜೆಪಿ ಘಟಕ ಮಧ್ಯ ಕರ್ನಾಟಕದ ಪವಾಡ ಪುರುಷ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮಾದರಿ ಉಡುಗೊರೆ ನೀಡಲಿದೆ. ಅಲ್ಲದೇ ಕಮಲದ ಕಸೂತಿ ಇರುವ ಬಿಳಿ ಕಂಬಳಿಯಿಂದ ಸನ್ಮಾನ ಮಾಡಲಾಗುತ್ತದೆ. ಬರದನಾಡಲ್ಲಿ ಬೆಳೆಯುವ ಮೆಣಸಿನಕಾಯಿ ಸಸಿ, ಬದನೆ ಗಿಡಗಳಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಲು ತಯಾರಿ ನಡೆಸಿದ್ದಾರೆ. 6 ಟ್ರೇಗಳಲ್ಲಿ ಸಸಿಗಳನ್ನಿಟ್ಟು ನೀರೆರೆಸುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ ಎನ್ನಲಾಗಿದೆ. ಸದ್ಯ ಮೋದಿ ಅವರ ಆಗಮನಕ್ಕಾಗಿ ಮುರುಘಾ ರಾಜೆಂದ್ರ ಕ್ರೀಡಾಂಗಣ ಸಜ್ಜಾಗಿದೆ. ಸ್ಟೇಡಿಯಂ ಸುತ್ತಲೂ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.