ಮಂಡ್ಯ:
ಸಿ.ಟಿ.ರವಿ ಅವರಿದ್ದ ಕಾರು ರಸ್ತೆಯಲ್ಲಿ ನಿಂತಿದ್ದ ಎರಡು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಮೃತಪಟ್ಟಿದ್ದವರ ಕುಟುಂಬಕ್ಕೆ ಶಾಸಕ ಸಿ.ಟಿ.ರವಿ ನೆರವು ನೀಡಿದ್ದಾರೆ.
ಮಂಡ್ಯದ ಎಎಸ್‌ಪಿ ಎ.ಆರ್.ಬಲರಾಮೇಗೌಡರ ಮನೆಯಲ್ಲಿ ಮೃತರ ಕುಟುಂಬ ಸದಸ್ಯರ ಜೊತೆ ಮಾತುಕತೆ ನಡೆಸಿ, ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂ.ಗಳನ್ನು ಶಾಸಕ ರವಿ ನೀಡಿದ್ದಾರೆ.
ಪ್ರಕರಣ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ನೆರವು ಮಾತ್ರ, ಅಪಘಾತ ಪ್ರಕರಣ ಕೋರ್ಟ್‌ನಲ್ಲಿ ಮುಂದುವರಿಯಲಿದೆ ಎಂದ ಶಾಸಕ ಸಿಟಿ ರವಿ ತಿಳಿಸಿದ್ದಾರೆ.
ಫೆ. 19ರಂದು ಶಾಸಕ ಸಿ.ಟಿ.ರವಿ ಅವರ ಕಾರು ಕುಣಿಗಲ್ ಬಳಿ ಅಪಘಾತಕ್ಕೊಳಗಾಗಿತ್ತು. ಪ್ರಕರಣದಲ್ಲಿ ಕನಕಪುರ ತಾಲೂಕಿನ ಸೂರನಹಳ್ಳಿಯ ಶಶಿಕುಮಾರ್, ಸುನಿಲ್ ಗೌಡ ಮೃತಪಟ್ಟಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
