ನವದೆಹಲಿ:
ಗುರುಗ್ರಾಮ ರೆಸಾರ್ಟ್ ನಲ್ಲಿರುವ ಅರ್ಧಕ್ಕಿಂತ ಹೆಚ್ಚು ಶಾಸಕರನ್ನು ಲೆಮೆನ್ ಟ್ರೀ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದೆ. ಈ ಮೂಲಕ ಸಿಎಲ್‍ಪಿ ಸಭೆಯ ಬೆಳವಣಿಗೆ ನೋಡಿಕೊಂಡು ಅವರನ್ನು ರಾಜ್ಯಕ್ಕೆ ಕರೆತರುವ ನಿರ್ಧಾರವನ್ನು ಬಿಜೆಪಿಯ ನಾಯಕರು ಕೈಗೊಂಡಿದ್ದಾರೆ.
ಗುರುಗ್ರಾಮದ ಐಟಿಸಿ ಗ್ರ್ಯಾಂಡ್ ಭಾರತ್ ಹೋಟೆಲ್‍ನಿಂದ 2 ಕಿಮೀ ದೂರದಲ್ಲಿರುವ ಸಾರಾಯ್‍ನ ಲೆಮೆನ್ ಟ್ರೀ ಹೋಟೆಲ್ ಗೆ ಹೊಸದಾಗಿ ಆಯ್ಕೆಯಾಗಿರುವ ಕೆಲ ಶಾಸಕರು ಸೇರಿದಂತೆ 23 ಜನ ಶಾಸಕರನ್ನು ರಹಸ್ಯವಾಗಿ ಹರ್ಯಾಣದ ಬಿಜೆಪಿ ನಾಯಕರು ಶಿಫ್ಟ್ ಮಾಡಿದ್ದಾರಂತೆ.
ಅತೃಪ್ತರ ನಡೆ ಮೇಲೆ ಬಿಜೆಪಿ ಇನ್ನೂ ವಿಶ್ವಾಸ ಇರಿಸಿಕೊಂಡಿದ್ದು, ಸಂಜೆ ಸಿಎಲ್‍ಪಿ ಮೀಟಿಂಗ್ಗೆ ಅತೃಪ್ತರು ಗೈರಾದರೆ, ಬಿಜೆಪಿ ಶಾಸಕ ರೆಸಾರ್ಟ್ ವಾಸ್ತವ್ಯ ಮುಂದುವರಿಯಲಿದೆ. ಹೀಗಾಗಿ ಅತೃಪ್ತರ ನಡೆ ಮೇಲೆ ಬಿಜೆಪಿ ರೆಸಾರ್ಟ್ ವಾಸ್ತವ್ಯ ನಿಂತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ