‘ನಮ್ಮ ಮೌನ ವಿಜಯದ ಸಂಕೇತ’ – ಆರ್.ಅಶೋಕ್

ಬೆಂಗಳೂರು:

      ವಿಧಾನಸಭೆಯಲ್ಲಿ ಆಡಳಿತಾರೂಢ ಸದಸ್ಯರು ಎಷ್ಟೇ ಧರಣಿ ಮಾಡಲಿ, ಗಲಾಟೆ ಮಾಡಲಿ ನಾವು ಮೌನವಾಗಿಯೇ ಇರುತ್ತೇವೆ. ಏಕೆಂದರೆ ನಮ್ಮ ಮೌನ ವಿಜಯದ ಸಂಕೇತ ಎಂದು ಬಿಜೆಪಿ ಹಿರಿಯ ಸದಸ್ಯ ಆರ್.ಅಶೋಕ್ ಹೇಳಿದ್ದಾರೆ‌.

      ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸಮತ ಕೇಳಿ ಎಂದು ನಾವು ಮೊದಲು ಹೇಳಲಿಲ್ಲ. ಕುಮಾರಸ್ವಾಮಿ ಅವರೇ ವಿಶ್ವಾಸಮತ ಕೇಳುತ್ತೇನೆ. ಸಮಯ ನಿಗಧಿಪಡಿಸುವಂತೆ ಕೇಳಿದ್ದಾರೆ. ಹೇಳಿದಂತೆ ಅವರು ನಡೆದುಕೊಳ್ಳಬೇಕು. ಆದರೆ ಆಡಳಿತಾರೂಢ ಸದಸ್ಯರು ಹಾಗೆ ಮಾಡುತ್ತಿಲ್ಲ, ಅವರೇ ಹೇಳಿಕೆ ನೀಡುತ್ತಾರೆ. ಅವರೇ ಪ್ರತಿಭಟಿಸುತ್ತಾರೆ ಅಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.

      ಸರ್ಕಾರಕ್ಕೆ ಬಹುಮತವಿಲ್ಲ ಎನ್ನುವುದು ಕಾಂಗ್ರೆಸ್-ಜೆಡಿಎಸ್ ಸದಸ್ಯರಿಗೆ ಬಹಳ ಚೆನ್ನಾಗಿಯೇ ಅರಿವಾಗಿದೆ. ಹೀಗಾಗಿ ಅವರು ವಿಶ್ವಾಸಮತಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link