‘ವಿಶ್ವಾಸಮತ ಪ್ರಕ್ರಿಯೆ ಇಂದೇ ಮುಗಿಸಿ’- ರಾಜ್ಯಪಾಲರ ಸಂದೇಶ!!

ಬೆಂಗಳೂರು:

      ವಿಶ್ವಾಸಮತ ಪ್ರಕ್ರಿಯೆ ಇಂದೇ ಮುಗಿಸಿ ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎಂದು ವಿಧಾನಸಭಾ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಸದನದಲ್ಲಿ ತಿಳಿಸಿದ್ದಾರೆ.

      ಎಂ.ಎಲ್.ಸಿ ರವಿಕುಮಾರ್, ಅರವಿಂದ ಲಿಂಬಾವಳಿ, ಮಾಜಿ ಸಿಎಂ ಜಗದೀಶ್ ಶೆಟ್ಟ ಮತ್ತು ಇತರರನ್ನು ಒಳಗೊಂಡ ಬಿಜೆಪಿ ನಿಯೋಗ ರಾಜ್ಯಪಾಲ ವಜುಭಾಯಿ ವಾಲ ಅವರನ್ನು ಭೇಟಿ ಮಾಡಿ, 24 ಗಂಟೆಯಲ್ಲಿ ಮೈತ್ರಿ ಸರ್ಕಾರ ಬಹುಮತ ಸಾಭೀತುಪಡಿಸುವಂತೆ ಸೂಚಿಸಬೇಕು. ಈ ಮೂಲಕ ತಾವು ಮಧ್ಯಪ್ರವೇಶಿಸಿ ಅಲ್ಪಮತಕ್ಕೆ ಕುಸಿದಿರುವ ಸರ್ಕಾರಕ್ಕೆ ಬಹುಮತ ಸಾಭೀತಿಗೆ ಸೂಚಿಸಬೇಕು ಎಂದು ಮನವಿ ಮಾಡಿತು.

      ಇದರ ಬೆನ್ನಲ್ಲೇ ರಾಜಭವನದಿಂದ ವಿಶೇಷವಾಧಿಕಾರಿಗಳು ಸ್ಪೀಕರ್ ಕಚೇರಿಗೆ ಆಗಮಿಸಿ ಚರ್ಚೆ ನಡೆಸಿದರು. ವಿಶ್ವಾಸಮತಯಾಚನೆ ಪ್ರಕ್ರಿಯೆಯನ್ನು ಸ್ಪೀಕರ್‌ ವಿಳಂಬ ಮಾಡುತ್ತಿದ್ದಾರೆ ಎಂಬ ವಿಷಯದಲ್ಲಿ ವಿಧಾನಸಭೆಯಲ್ಲಿ ಭಾರಿ ಕೋಲಹಲ ನಡೆದಿರುವ ಬೆನ್ನಲ್ಲೇ ರಾಜ್ಯಪಾಲರು ಸದನಕ್ಕೆ ಸಂದೇಶ ರವಾನಿಸಿದ್ದು, ಇಂದು ಸಂಜೆಯೊಳಗೆ ವಿಶ್ವಾಸಮತಯಾಚನೆ ಮುಗಿಸುವಂತೆ ಸ್ಪೀಕರ್ ಗೆ ಸೂಚಿಸಿದ್ದಾರೆ ಎನ್ನಲಾಗಿದೆ.

      ಇದೇ ವೇಳೆ ರಾಜ್ಯಪಾಲರ ಈ ಸಂದೇಶಕ್ಕೆ ಅಡಳಿತ ಪಕ್ಷದವರು ವ್ಯಾಪಾಕ ಖಂಡನೆ ವ್ಯಕ್ತಪಡಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಇನ್ನು ಇದೇ ವೇಳ ಸಚಿವ ಕೃಷ್ಣ ಭೈರೇಗೌಡರು ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಭಾನಿಯಮಗಳನ್ನು ಹೇಳುತ್ತಿದ್ದ ಹಾಗೇ ವಿರೋಧ ಪಕ್ಷದವರಿಂದ ವ್ಯಾಪಕ ವಿರೋಧ ಕೇಳಿ ಬಂದಿದ್ದು, ಸದ್ಯ ಸದನ ನಡೆಯುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap