ಹಣಕ್ಕಾಗಿ ಶಾಸಕರಿಗೆ ಬ್ಲಾಕ್ ಮೇಲ್ : ಫೋಕಸ್ ಚಾನೆಲ್ MD ಅಂದರ್!!!

ಬೆಂಗಳೂರು:

     ಶಾಸಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಫೋಕಸ್ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ಕಮ್ಮಾರ (35) ಎನ್ನುವವನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

      ಬಂಧಿತ ಆರೋಪಿ ಹೇಮಂತ್ ನಕಲಿ ವಿಡಿಯೋ ಸೃಷ್ಟಿಸಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರಿಗೆ, ನಿಮ್ಮ ಖಾಸಗಿ ಬದುಕಿನ ವಿಡಿಯೋ ನನ್ನ ಬಳಿ ಇದೆ. ಕೇವಲ 50 ಲಕ್ಷ ರೂ. ಕೊಟ್ಟರೆ ಆ ಸಿಡಿಯನ್ನು ನಿಮಗೆ ಒಪ್ಪಿಸಿಬಿಡುತ್ತೇನೆ ಎಂದು ಬೇಡಿಕೆಯಿಟ್ಟು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

      ಈ ಸಂಬಂಧ ಸಿಸಿಬಿ ಪೊಲೀಸರು ಭಾನುವಾರ ನಗರದ ಪ್ಯಾಲೇಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಹೇಮಂತ್​ನನ್ನು ಬಂಧಿಸಿದ್ದಾರೆ. ಸಂಜಯನಗರದಲ್ಲಿರುವ ಹೇಮಂತ್​ನ ಮನೆ ಹಾಗೂ ಖಾಸಗಿ ವಾಹಿನಿ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

      ಹೇಮಂತ್, ಈ ಹಿಂದೆಯೂ ಹಲವು ರಾಜಕಾರಣಿ ಹಾಗೂ ಉದ್ಯಮಿಗಳಿಗೆ ಬ್ಲಾಕ್ ಮೇಲ್ ಮಾಡಿರುವುದು ವಿಚಾರಣೆ ವೇಳೆ ಬಯಲಾಗುತ್ತಿದೆ. ಹೇಮಂತ್ ಜೊತೆಗೆ ಬ್ಲಾಕ್‍ಮೇಲ್‍ಗೆ ಒಳಗಾದವರು ದೂರು ನೀಡಬಹುದು ಎಂದು ಸಿಸಿಬಿ ಮನವಿ ಮಾಡಿಕೊಂಡಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap