ಬೆಂಗಳೂರು :
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಿದ್ದು, BMTC’ ಸಹಾಯವಾಣಿ ಸಂಖ್ಯೆ ಬದಲಾವಣೆ ಮಾಡಿದೆ.
ಇದುವರೆಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಲಹೆ/ದೂರುಗಳನ್ನು ಹಾಗೂ ಇನ್ನಿತರೆ ಸಂಸ್ಥೆಯ ಮಾಹಿತಿಯನ್ನು ಪ್ರಯಾಣಿಕರಿಗೆ ಒದಗಿಸುವ ಸಲುವಾಗಿ 18004251663 ನಂಬರ್‌ಗೆ ಪ್ರಯಾಣಿಕರು ಕರೆ ಮಾಡಿ ದೂರು ಕೊಡಬಹುದಿತ್ತು. ಸಲಹೆಗಳನ್ನು ಸಹ ನೀಡಲು ಅವಕಾಶವಿತ್ತು. ಆದರೆ, ಇನ್ನು ಮುಂದೆ ಈ ಸಂಖ್ಯೆ ಲಭ್ಯವಿರುವುದಿಲ್ಲ.
ಸಹಾಯವಾಣಿ (ಕಾಲ್ ಸೆಂಟರ್) ಸಂಖ್ಯೆ ಬದಲಾಗಿದ್ದು, ನೂತನ “ಸಹಾಯವಾಣಿ ಸಂಖ್ಯೆ 080-22483777” ಗೆ ಬದಲಾಗಿರುತ್ತದೆ.
ಇನ್ನೂ, ಸಂಸ್ಥೆಯ ನೂತನ “ಸಹಾಯವಾಣಿ ಸಂಖ್ಯೆ” ಯು ದಿನಾಂಕ: 31-08-2020 ರಿಂದ ಜಾರಿಗೆ ಬಂದಿದ್ದು, ಸದರಿ ಸಹಾಯವಾಣಿಯು ಪ್ರತಿದಿನ ಬೆಳಿಗ್ಗೆ 06:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಮಹಾನಗರ ಸಾರಿಗೆ ಸಂಸ್ಥೆ ಪ್ರಕಟಣೆ ಹೊರಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
