ಬೆಂಗಳೂರು:
ವಿದ್ಯಾರ್ಥಿಗಳ ಬಸ್‌ಪಾಸ್ ದರವನ್ನು ಏರಿಕೆ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳ ಬಸ್ ಪಾಸ್ ಮೇಲೆ 30 ರೂ ಹೆಚ್ಚಳ ಮಾಡಿದೆ.
ಶಾಲೆಯ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳು ಕೂಡ ವಾರ್ಷಿಕ ಬಸ್ ಪಾಸ್ ಕೊಳ್ಳಲು ಮುಂದಾಗಿದ್ದಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳ ಪ್ರತಿ ಪಾಸ್ ದರದ ಮೇಲೆ 30 ರೂಪಾಯಿ ಏರಿಕೆ ಮಾಡಿ ಬಿಎಂಟಿಸಿ ನಿರ್ಧಾರ ಪ್ರಕಟಿಸಿದೆ.
ಪ್ರತಿ ಪಾಸ್ ದರದ ಮೇಲೆ 30ರೂ ಹೆಚ್ಚಳಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಬಿಎಂಟಿಸಿ ನಷ್ಟದಲ್ಲಿದ್ದು ಈ ದರ ಹೆಚ್ಚಳ ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.
ಪಿಯುಸಿ ವಿದ್ಯಾರ್ಥಿಗಳು 900 ರೂ, ಪದವಿ ವಿದ್ಯಾರ್ಥಿಗಳು 1100, ವೃತ್ತಿಪರ ಕಾಲೇಜು 1150, ತಾಂತ್ರಿಕ, ವೈದ್ಯಕೀಯ ವಿದ್ಯಾರ್ಥಿಗಳು 1680, ಸಂಜೆ ಕಾಲೇಜು, ಪಿಎಚ್‌ಡಿ ವಿದ್ಯಾರ್ಥಿಗಳು 1480ರೂ ವಾರ್ಷಿಕ ಪಾಸ್ ಕೊಳ್ಳಲು ಹಣ ನೀಡಬೇಕಾಗಿದೆ. ಸೇವಾ ಶುಲ್ಕ ಪ್ರತ್ಯೇಕವಾಗಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ