ಬೆಂಗಳೂರು:
ನಾಳೆ ಏನಾದರು ನೀವೂ ಬಿಎಂಟಿಸಿ ಬಸ್ ಇದೆ ಆರಾಮಾಗಿ ಪ್ರಯಾಣ ಮಾಡಬಹುದು ಅಂತ ಅಂದುಕೊಂಡು ಇದ್ದರೆ ನಿಮ್ಮ ಎಲ್ಲ ಕೆಲಸಗಳಿಗೆ ಬ್ರೇಕ್ ಬೀಳುತ್ತೆ.
ಹೌದು, ನಾಳೆ ಸಾರಿಗೆ ನೌಕರರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ BMTC ನೌಕರರಿಂದ ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ನಾಳೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಿಗೋದು ಅನುಮಾನವಾಗಿದ್ದು, ಬೆಂಗಳೂರು ಚಲೋ ಹಿನ್ನೆಲೆ ನೌಕರರು ಚಲೋದಲ್ಲಿ ಭಾಗಿಯಾಗಲಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದ್ದು, ಸಾರಿಗೆ ಸಚಿವ ತಮ್ಮಣ್ಣ ಕಾರ್ಯವೈಖರಿ ಖಂಡಿಸಿ ಬೆಂಗಳೂರು ಚಲೋ ನಡೆಸಲಾಗುತ್ತಿದೆ.. ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆ ಅಗ್ರಹಿಸಿ ಒಂದು ದಿನದ ಮುಷ್ಕರಕ್ಕೆ ಸಜ್ಜಾಗಿದ್ದು, ನಾಳೆ ಬೆಳಗ್ಗೆಯಿಂದ ಬೆಂಗಳೂರಿನಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ..
ಬೇಡಿಕೆಗಳೇನು…??
*ನಾಲ್ಕು ಸಾರಿಗೆ ನಿಗಮಗಳನ್ನು ಒಂದು ಮಾಡಿ.
* ಎಲ್ ಎಂಎಸ್ ಮಿಷನ್ ನ್ನು ಅಳವಡಿಸುವುದು.
* ಹೊಸ ಇಟಿಎಂ ಯಂತ್ರಗಳನ್ನು ಒದಗಿಸುವುದು.
* ಹೆದ್ದಾರಿಯ ಟೋಲ್ ಫ್ರೀ ಶುಲ್ಕವನ್ನು ರದ್ದು ಮಾಡಬೇಕು.
* ಡೀಸೆಲ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು.
* ಸಾರಿಗೆ ನೌಕಾರರ ವೇತನವನ್ನು ಸರ್ಕಾರವೇ ಭರಿಸಬೇಕು.
*ಖಾಸಗಿ ಬಸ್ ಮಾಲೀಕರ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಬೇಕು.
* ಕಾರ್ಮಿಕರ ಹಕ್ಕಿನ ರಜೆಗಳನ್ನು ನಿಬಂಧನೆ ಇಲ್ಲದೇ ನೀಡಬೇಕು.
* ನಿಗಮಗಳಿಗೆ ಮೋಟಾರ್ ವೆಹಿಕಲ್ ತೆರಿಗೆ ರಿಯಾಯಿತಿ ಕೊಡಬೇಕು.
ಇವೆಲ್ಲ ಬೇಡಿಕೆಗಳನ್ನ ಮುಂದಿಟ್ಟುಕೊಂಡು ನಾಳೆ 3 ಸಾವಿರಕ್ಕೂ ಹೆಚ್ಚು ನೌಕಾರರು ಪ್ರತಿಭಟನೆ ಯಲ್ಲಿ ಭಾಗಿಯಾಗಲಿದ್ದಾರೆ.. ಲಾಲ್ ಬಾಗ್ ಹಾಪ್ಸ್ ಕಾಮ್ಸ್ ನಿಂದ ಪ್ರತಿಭಟನಾ ರ್ಯಾಲಿ ನಡೆಯಲಿದ್ದು, ಬಹಿರಂಗ ಸಭೆ ನಡೆಸಲಿದ್ದಾರೆ. ನಂತರ ಮಂತ್ರಿಗಳಿಗೆ ಮನವಿ ಪತ್ರ ವೊಂದು ನೀಡಿಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
