ಇವಿಎಂ ಯಂತ್ರದಲ್ಲಿ ಮಾತ್ರ ಬಿಎಂಟಿಸಿ ಬಸ್ ಪಾಸ್ !?

ಬೆಂಗಳೂರು:Related image

     ಇನ್ನು ಮುಂದೆ ಬಿಎಂಟಿಸಿ ನಿತ್ಯ ಬಸ್‌ಪಾಸುಗಳು ಇವಿಎಂ( ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷಿನ್) ಮೂಲಕವೇ ದೊರೆಯಲಿದೆ. ಮುಂಚಿತವಾಗಿಯೇ ಮುದ್ರಿಸಿದ ಪಾಸ್‌ಗಳ ವೆಚ್ಚ, ನಿರ್ವಹಣಾ ವೆಚ್ಚ ಹಾಗೂ ಸಿಬ್ಬಂದಿ ವೆಚ್ಚಕ್ಕೆ ಕಡಿವಾಣ ಹಾಕಲು ಈ ಯೋಜನೆಯನ್ನು ರೂಪಿಸಲಾಗಿದೆ.

      ಶೀಘ್ರದಲ್ಲಿಯೇ ಈ ಯೋಜನೆ ಜಾರಿಗೆ ಬರಲಿದ್ದು, ನಿರ್ವಾಹಕರು 70ರೂ ಹಾಗೂ 140ರೂ ಮೊತ್ತದ ಪಾಸುಗಳನ್ನು ಇಟಿಎಂ ಮೂಲಕವೇ ವಿತರಣೆ ಮಾಡಲಿದ್ದಾರೆ. ಜೂನ್ ನಲ್ಲಿ ಘಟಕ 28ರಲ್ಲಿ ಪ್ರಾಯೋಗಿಕವಾಗಿ ಇಟಿಎಂ ಮೂಲಕ ನಿತ್ಯದ ಪಾಸ್ ಪಡೆಯಬಹುದು. 

      ಪ್ರಯಾಣಿಕರು ಕಡ್ಡಾಯವಾಗಿ ಫೋಟೊ ಇರುವ ಗುರುತಿನ ಚೀಟಿ ತೋರಿಸಿ ಪಾಸ್ ತೆಗೆದುಕೊಳ್ಳಬೇಕು. ಮೊಬೈಲ್ ಅಥವಾ ಲ್ಯಾಪ್‌ಟಾಪ್ ನಲ್ಲಿ ಪಿಡಿಎಫ್ ಮಾದರಿಯಲ್ಲಿರುವ ಗುರುತಿನ ಚೀಟಿ ತೋರಿಸಿಯೂ ಪಾಸ್ ಪಡೆಯಬಹುದು. 

ಸಾಧಕ – ಬಾಧಕಗಳು :

      ಗುರುತಿನ ಚೀಟಿ ಸಂಖ್ಯೆ, ದಿನ ಸೇರಿ ಹೆಚ್ಚಿನ ಮಾಹಿತಿ ಮುದ್ರಿತವಾಗುವುದರಿಂದ ದುರುಪಯೋಗ ಕಡಿಮೆ, ಥರ್ಮಲ್ ಇಂಕ್‌ನಲ್ಲಿ ಮಾಹಿತಿ ಮುದ್ರಿಸುವುದರಿಂದ ಕಡಿಮೆ ಅವಧಿ ಬಾಳಿಕೆ. 24 ಗಂಟೆ ನಂತರ ಇಂಕ್ ಕ್ರಮೇಣ ಮಾಸಿ ಹೋಗುತ್ತದೆ. 

      ನಿತ್ಯದ ಬಸ್ ಪಾಸ್ ಕೊಳ್ಳಲು ಗುರುತಿನ ಚೀಟಿ ಕಡ್ಡಾಯಗೊಳಿಸಿದ ಬಳಿಕ ಬಿಎಂಟಿಸಿಗೆ ವಾರ್ಷಿಕ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಗುರುತಿನ ಚೀಟಿ ಇಲ್ಲದಿರುವ ಪ್ರಯಾಣಿಕರಿಗೆ ಪಾಸ್ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಂಸ್ಥೆಗೆ ನಷ್ಟವಾಗುವ ಸಾಧ್ಯತೆ ಇದೆ. 

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ