ಶ್ರೀಲಂಕಾದಲ್ಲಿ ಮತ್ತೆ ಬಾಂಬ್ ಸ್ಫೋಟ!!!

ಕೊಲಂಬೋ: 

      ಐಸಿಸ್‌ ಉಗ್ರರ ಅಟ್ಟಹಾಸಕ್ಕೆ ನಲುಗಿ ಹೋಗಿರುವ ಶ್ರೀಲಂಕಾದಲ್ಲಿ ಗುರುವಾರ ಮತ್ತೆ ಬಾಂಬ್‌ ಸ್ಫೋಟ ಸಂಭವಿಸಿದೆ.

     ರಾಜಧಾನಿ ಕೊಲಂಬೋದಿಂದ 40 ಕಿ.ಮೀಟರ್ ದೂರದಲ್ಲಿರುವ ಪುಗೋಡಾ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಇಂದು ಗುರುವಾರ ಬಾಂಬ್ ಸ್ಫೋಟ ನಡೆದಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

      ಕಳೆದ ನಾಲ್ಕು ದಿನಗಳ ಹಿಂದಷ್ಟೇ ಈಸ್ಟರ್ ಸಂಡೇಯಂದು ಶ್ರೀಲಂಕಾದಲ್ಲಿ 8 ಬಾಂಬ್ ದಾಳಿಗಳು ನಡೆದಿದ್ದು, 350ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ತನಿಖೆ ಆರಂಭವಾಗಿದ್ದು, ಹಲವಾರು ಮಂದಿಯನ್ನು ಬಂಧಿಸಲಾಗಿತ್ತು. ಉಗ್ರ ಸಂಘಟನೆ ISIS ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು

      ವ್ಯಾಪಕ ಕಟ್ಟೆಚ್ಚರದ ನಡೆವೆ ಮತ್ತೆ ಕೇಳಿಸಿದ ಬಾಂಬ್‌ ಸದ್ದು ಜನತೆಯನ್ನು ಇನ್ನಷ್ಟು ಭಯಭೀತರನ್ನಾಗಿಸಿದೆ. ಪೊಲೀಸರು ಸ್ಥಳ ಸುತ್ತುವರಿದು ತನಿಖೆ ಆರಂಭಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap