ಬೆಂಗಳೂರು :
ಬೆಂಗಳೂರಿನ ಹೈಕೋರ್ಟ್ ನ್ನು ಬಾಂಬ್ ಇಟ್ಟು ಬ್ಲಾಸ್ಟ್ ಮಾಡುವುದಾಗಿ ಉಗ್ರರಿಂದ ಬೆದರಿಕೆ ಪತ್ರವೊಂದು ಬಂದಿದೆ.
ಹೈಕೋರ್ಟ್ ಗೆ ಬಂದಿರುವ ಬೆದರಿಕೆ ಪತ್ರ ಹರ್ದರ್ಶನ್ ಸಿಂಗ್ ಎಂಬಾತನ ಹೆಸರಿನಿಂದ ಬಂದಿದ್ದು, ಈತ ಇಂಟರ್ ನ್ಯಾಷನಲ್ ಖಲಿಸ್ತಾನ ಸಪೋರ್ಟ್ ಗ್ರೂಪ್ ಗೆ ಸೇರಿದ ವ್ಯಕ್ತಿ ಎನ್ನಲಾಗಿದ್ದು, ತನ್ನ ಮಗನ ಜೊತೆಗೆ ಬಂದು ಬೆಂಗಳೂರಿನ ಹೈಕೋರ್ಟ್ ಸೆಪ್ಟೆಂಬರ್ 30 ರಂದು ಬ್ಲಾಸ್ಟ್ ಮಾಡುತ್ತೇವೆ ಎಂದು ಹೈಕೋರ್ಟ್ ರಿಜಿಸ್ಟಾರ್ ಗೆ ದೆಹಲಿ ವಿಳಾಸದಿಂದ ಪತ್ರ ಬಂದಿದೆ.
ಸದ್ಯ ಪತ್ರ ಆಧರಿಸಿ ವಿಧಾನಸೌಧದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಂಕಿತ ಉಗ್ರರಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.
ಇತ್ತೀಚೆಗಷ್ಟೇ ಬೆಂಗಳೂರು ಸೇರಿದಂತೆ ದೇಶದ ವಿವಿಧ ರೈಲು ನಿಲ್ದಾಣಗಳಲ್ಲಿ ಬಾಂಬ್ ಸ್ಪೋಟ ಮಾಡುವುದಾಗಿ ಬೆದರಿಕೆ ಹಾಕಿದ್ದ ಉಗ್ರರು ಇದೀಗ ಕರ್ನಾಟಕ ಹೈಕೋರ್ಟ್‌ಗೆ ಬಾಂಬ್ ಇಡುವುದಾಗಿ ಉಗ್ರರು ಬೆದರಿಕೆ ಪತ್ರವೊಂದನ್ನು ರವಾನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
