ರಾಮನಗರ : ಬೆಳ್ಳಂಬೆಳಗ್ಗೆ ಆತಂಕ ಸೃಷ್ಟಿಸಿದ ಬಾಂಬ್!!?

ರಾಮನಗರ :

      ನಗರದ ಹೋಟೆಲ್‌ ಒಂದರ ಮುಂಭಾಗದಲ್ಲಿ ‘ಬಾಂಬ್‌’ ವದಂತಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ಬೆಳ್ಳಂಬೆಳಗ್ಗೆ  ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.

      ಬಾಂಬ್‌ ರೀತಿಯ ಕೆಂಪು ಬಣ್ಣದ ವಸ್ತುವೊಂದು ಅನುಮಾನಾಸ್ಪದವಾಗಿ ಬಿದ್ದಿದ್ದನ್ನು ಕಂಡು ಭಯಭೀತರಾದ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹತಿ ನೀಡಿದ್ದಾರೆ. ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪತ್ತೆಯಾದ ಅನುಮಾನಾಸ್ಪದ ವಸ್ತು ಬಾಂಬ್ ಅಲ್ಲ ದೊಡ್ಡ ಗಾತ್ರದ ಪಟಾಕಿ ಎಂದು ಖಾತ್ರಿ ಪಡಿಸಿದ್ದಾರೆ.

      ರಾತ್ರಿ ಗಣೇಶ ವಿಸರ್ಜನೆ ಸಮಯದಲ್ಲಿ ಈ ಪಟಾಕಿಗಳು ಬಿದ್ದಿದ್ದು, ಬೆಳಿಗ್ಗೆ ಪಟಾಕಿ ನೋಡಿ ಬಾಂಬ್ ಎಂದು ಜನರು ಆತಂಕಕ್ಕೆ ಒಳಗಾಗಿದ್ದರು.

      ಈ ಹಿಂದೆ ರಾಮನಗರದಲ್ಲಿ ಉಗ್ರರು ಅಡಗಿಸಿಟ್ಟಿದ್ದ ಬಾಂಬ್ ಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ನಿಜವಾಗಿಯೂ ಇವು ಬಾಂಬ್ ಗಳು ಇರಬೇಕು ಎಂದು ನಂಬಿದ್ದ ಸ್ಥಳೀಯರು ಆತಂಕ ಮನೆ ಮಾಡಿತ್ತು. ಅದರೆ ಅಲ್ಲಿ ಪತ್ತೆಯಾಗಿದ್ದು ದೊಡ್ಡ ಗಾತ್ರದ ಪಟಾಕಿ ಎಂದು ತಿಳಿದು ಬಂದಿದ್ದು, ಜನರು ನಿರಾಳರಾಗಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap