ಯಾದಗಿರಿ:
ಕ್ರಿಮಿನಾಶಕವನ್ನು ಜ್ಯೂಸ್ ಎಂದು ಕುಡಿದು ಮಕ್ಕಳಿಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ವಡಗೇರಾ ತಾಲೂಕಿನ ಕೊಡಲ್ ಗ್ರಾಮದಲ್ಲಿ ನಡೆದಿದೆ.
ಖೈರನ್‍ಬಿ (2) ಮತ್ತು 4 ತಿಂಗಳ ಅಫ್ಸಾನಾ ಮೃತ ಮಕ್ಕಳು. ಖೈರನ್‍ಬಿ ತನ್ನ ತಂಗಿ ಅಫ್ಸಾನಾಳನ್ನು ಆಟವಾಡಿಸುತ್ತಿದ್ದಳು. ಈ ವೇಳೆ ಜ್ಯೂಸ್ ಎಂದು ಮೊದಲಿಗೆ ಬಾಟಲಿನಲ್ಲಿ ಹಾಕಿ ಮಗುವಿಗೆ ಕುಡಿಸಿದ್ದಾಳೆ. ನಂತರ ತಾನೂ ಕುಡಿದಿದ್ದಾಳೆ. ಈ ವೇಳೆ ತಾಯಿ ಶಹನಹಾಜ್ ಮನೆಯೊಳಗೆ ಕೆಲಸ ಮಾಡುತ್ತಿದ್ದರು. ಹೊರಗೆ ಬಂದು ನೋಡಿದಾಗ ಮಕ್ಕಳು ಒದ್ದಾಡುತ್ತಿದ್ದವು. ಮಕ್ಕಳು ವಿಷ ಸೇವಿಸಿದ್ದಕ್ಕೆ ಆಘಾತಗೊಂಡು ತಾಯಿ ಶಹನಹಾಜ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಕ್ಷಣ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳಿಬ್ಬರೂ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಶಹೇಜಾನ್ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಏನೂ ಅರಿಯದ ಮುಗ್ಧ ಕಂದಮ್ಮಗಳಿಬ್ಬರ ಸಾವಿನಿಂದಾಗಿ ಪೋಷಕರ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯ ಯಾದಗಿರಿ ಖಾಸಗಿ ಆಸ್ಪತ್ರೆಯಲ್ಲಿ ಶಹನಹಾಜ್ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ