ತುಮಕೂರು : ಮ್ಯಾಗಿ ಮಾಡಲು ಹೋದ ಬಾಲಕ ಗ್ಯಾಸ್ ಅಪಘಾತದಲ್ಲಿ ಸಾವು!!!

ತುಮಕೂರು :

      ಮ್ಯಾಗಿ ಮಾಡಲು ಹೋಗಿ ಗ್ಯಾಸ್ ಲೀಕ್ ಆಗಿ 7 ವರ್ಷದ ಬಾಲಕ ಸಾವನ್ನಪ್ಪಿರುವ ದುರ್ಘಟನೆ ನಗರದ ಕ್ರಿಸ್ಚಿಯನ್ ಸ್ಟ್ರೀಟ್ ನಲ್ಲಿ ನಡೆದಿದೆ.

      ನೋಯಲ್ (7) ಮೃತಪಟ್ಟ ಬಾಲಕ. ಈತ ತನ್ನ ಮನೆಯಲ್ಲಿ ಮ್ಯಾಗಿ ಮಾಡಲು ಪ್ರಯತ್ನಿಸಿ ಗ್ಯಾಸ್ ಸ್ಟೌವ್ ಆನ್ ಮಾಡಿದ್ದು, ತಡವಾಗಿ ಲೈಟರ್ ಆನ್ ಮಾಡಿದ ಪರಿಣಾಮ ಗ್ಯಾಸ್ ಸೋರಿಕೆ ಆಗಿ ಬೆಂಕಿ ಹೊತ್ತಿಕೊಂಡಿದೆ. ಬಾಲಕನಿಗೆ ತೀವ್ರ ತರದ ಸುಟ್ಟ ಗಾಯಗಳಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

      ಕಳೆದ 3 ದಿನಗಳಿಂದ ಈತನಿಗೆ ಚಿಕಿತ್ಸೆ ದೊರೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ಇಂದು ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

      ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap