ಧಾರವಾಡ : ಶಿಕ್ಷಕಿಗೆ ಹೋಂ’ವರ್ಕ್ ತೋರಿಸಲು 35 ಕಿ.ಮೀ ಪ್ರಯಾಣಿಸಿದ ಬಾಲಕ!!

ಧಾರವಾಡ :

     ಶಿಕ್ಷಕಿ ನೀಡಿದ ಹೋಂ ವರ್ಕ್ ತೋರಿಸಲು 8 ವರ್ಷದ ಬಾಲಕನೊಬ್ಬ 35 ಕಿ.ಮೀ. ಪ್ರಯಾಣ ಮಾಡಿದ ಅಚ್ಚರಿಯ ಸಂಗತಿ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿಬೂದಿಹಾಳದಲ್ಲಿ ನಡೆದಿದೆ.

     8 ವರ್ಷದ ಬಾಲಕ ಪವನ್ ಕಂಠಿ ಹೋಮ್ ವರ್ಕ್ ತೋರಿಸಿ, ಪಠ್ಯ ಪುಸ್ತಕಗಳನ್ನು ಪಡೆದುಕೊಂಡು ಹೋಗಲೆಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿಬೂದಿಹಾಳದಿಂದ ಹುಬ್ಬಳ್ಳಿಗೆ ಬಂದ ವಿದ್ಯಾರ್ಥಿ.

     ಬಾಲಕ ಪವನ್ ತಂದೆ-ತಾಯಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. 2ನೇ ತರಗತಿ ಓದುತ್ತಿರುವ ಪವನ್ ಗೆ ಆನ್ ಲೈನ್ ಕ್ಲಾಸ್ ಸೌಲಭ್ಯವಿಲ್ಲ. ಹೀಗಾಗಿ ಹುಬ್ಬಳ್ಳಿಯಲ್ಲಿರುವ ತನ್ನ ಶಿಕ್ಷಕಿ ಅನಸೂಯಾ ಅವರಿಗೆ ಹೋಂ ವರ್ಕ್ ತೋರಿಸಲು 35 ಕಿ.ಮೀ. ಪ್ರಯಾಣಿಸಿ ಬಂದಿದ್ದಾನೆ.

     ಕಳೆದ ತಿಂಗಳು ಟೀಚರ್ ಭೇಟಿಯಾಗಿದ್ದ ಪವನ್ ಗೆ ಮತ್ತೆ ಒಂದು ತಿಂಗಳಿಗಾಗುವಷ್ಟು ಪಾಠ ಮತ್ತು ಹೋಂ ವಕ್೯ ನೀಡಿ ಕಳುಹಿಸಿದ್ದರು. ಸದ್ಯ ಅವೆಲ್ಲವನ್ನ ಕಂಪ್ಲೀಟ್ ಮಾಡಿರೋ ಪವನ್ ತನ್ನ ತಾಯಿ ಜೊತೆ ಹಠ ಹಿಡಿದು ಹೊಂ ವರ್ಕ್ ತೋರಿಸಲು ಹುಬ್ಬಳ್ಳಿಗೆ ಇಂದು ಬಂದಿದ್ದನು. ಬಾಲಕನ ವಿದ್ಯಾಸಕ್ತಿಗೆ ಅವನ ಶಿಕ್ಷಕಿ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿದ್ಯಾರ್ಥಿಗೆ ನೋಟ್‌ಬುಕ್ ಮತ್ತು ಪುಸ್ತಕ ನೀಡಿ ಕಳುಹಿಸಿದರು.

    ಕೊರೊನಾ ಭೀತಿಯಿಂದ ಶಾಲೆಗಳು ಬಂದ್ ಆಗಿದ್ದು, ಆನ್ ಲೈನ್ ಕ್ಲಾಸ್ ಗಳು ಆರಂಭವಾಗಿವೆ. ನಗರ ಪ್ರದೇಶಗಳಲ್ಲಿ ಆನ್ ಕ್ಲಾಸ್ ಗಳು ಸರಾಗವಾಗಿ ಸಾಗುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹಲವೆಡೆ ಇಂಟರ್ ನೆಟ್ ಸೌಲಭ್ಯಗಳಿಲ್ಲದೇ ಅನೇಕ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link