ಚೇಳೂರು :
ಚೇಳೂರು ಹೋಬಳಿ ಅಂಕಸಂದ್ರ ಗ್ರಾಪಂ ವ್ಯಾಪ್ತಿಯ ಕುರಬರಹಳ್ಳಿ, ಶೇಷನಹಳ್ಳಿ (ದೇವರಹಳ್ಳಿ), ಹಾಗಲಾವಾಡಿ ಹೋಬಳಿಯ ಮಂಚಲದೊರೆ ಗ್ರಾಪಂನ ಮಠದಾಳ ಕೆರೆಗಳಿಗೆ ಹೇಮಾವತಿ ನೀರು ತುಂಬಿಸಬೇಕು. ಈ ಭಾಗದ ಜನ, ಜಾನುವಾರುಗಳಿಗೆ ಕುಡಿಯುವುದರೊಂದಿಗೆ ಅಂತರ್ಜಲ ಮಟ್ಟವು ಸಹ ಹೆಚ್ಚಗುತ್ತಾದೆ ಎಂದು ಸುಮಾರು 20 ವರ್ಷಗಳಿಂದ ಗ್ರಾಮಸ್ಥರು ಹೋರಾಟವನ್ನು ಮಾಡುತ್ತಿದ್ದಾರೆ.
ದಿ.10.01.2019 ರಂದು ಕಾವೇರಿ ನೀರಾವರಿ ನಿಗಮದ 66 ನೇ ಮಂಡಲಿ ಸಭೆಯಲ್ಲಿ ತುಮಕೂರು ಶಾಖಾ ನಾಲೆ ಕಿ.ಮೀ 105.725 ರಿಂದ ಗುರುತ್ವಾಕರ್ಷಣೆಯಿಂದ ಕೊಳವೆಗಳ ಮೂಲಕ ದಿನದ 24 ಗಂಟೆಗಳಂತೆ 49 ದಿನಗಳ ಅವಧಿಯಲ್ಲಿ ಮಠದಾಳ ಕೆರೆ ಮತ್ತು ಇತರ ಕೆರೆಗಳಿಗೆ ನೀರನ್ನು ಪೂರೈಸಲು ಅನುಮೋದನೆಗೊಂಡಿರುತ್ತದೆ.
ದಿ.27.05.2020 ರ ಪತ್ರದಲ್ಲಿ ಕಾವೇರಿ ನೀರಾವರಿ ನಿಗಮ. ತಾಂತ್ರಿಕ-5 ತುಮಕೂರು ವಿಭಾಗ.523.ಮಠದಾಳ 2019-20 ಪತ್ರದಲ್ಲಿ ಉಲ್ಲೇಖ 1 ರ ಪತ್ರದಲ್ಲಿ ಸದರಿ ಪ್ರಸ್ತಾವನೆಗೆ ಅನೂಮೋದನೆ ನೀಡಿರುವ ಹಿನ್ನಲೆಯಲ್ಲಿ ಅರ್ಥಿಕ ಇಲಾಖೆಯಲ್ಲಿ ಮತ್ತೋಮ್ಮೆ ಪರಿಶೀಲಿಸಲಾಗಿರುತ್ತಾದೆ.
ಸದರಿ ಕಾಮಗಾರಿಯು ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಕೆರೆ ತುಂಬಿಸುವ ಯೋಜನೆಯಾಗಿದ್ದು. ಕಾಮಗಾರಿಯನ್ನು ಕೈಗೆತ್ತಿಕೋಳ್ಳಬೇಕಾದ ಅವಶ್ಯಕತೆ ಇರುವುದರಿಂದ 2019-20 ನೇ ಸಾಲಿನ ತುಮಕೂರು ವಿಭಾಗದ ಕ್ರಿಯಾ ಯೋಜನೆಯಲ್ಲಿ ರೂ 2 ಕೋಟಿ ರೂ. ಅನುದಾನ ಒದಗಿಸಿಕೊಳ್ಳಲಾಗಿರುತ್ತದೆ. ಸದರಿ ಕಾಮಗಾರಿಯನ್ನು ಪ್ರಸಕ್ತ ಸಾಲಿನಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡುವಂತೆ ಕೋರಿ ಪ್ರಸ್ತಾವನೆಯನ್ನು ಸರ್ಕಾರದ ಅವಗಾಹನೆಗೆ ಉಲ್ಲೇಖ[2] ರಲ್ಲಿ ಸಲ್ಲಿಸಲಾಗಿತ್ತು. ಸದರಿ ಕಾಮಗಾರಿಯ ಕುರಿತು ಸರ್ಕಾರದ ಉಲ್ಲೇಖ [3] ರ ಪತ್ರದಲ್ಲಿ ಸದರಿ ಪ್ರಸ್ತಾವನೆಗೆ ಅರ್ಥಿಕ ಇಲಾಖೆಯಲ್ಲಿ ಮತ್ತೋಮ್ಮೆ ಪರಿಶೀಸಲಾಗಿ ಟೆಂಡರ್ ಪ್ರಕ್ರಿಯೆಯನ್ನು ರದ್ದು ಪಡಿಸುವಂತೆ ನಿರ್ದೇಶನ ನೀಡಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ 33 ಗ್ರಾಮಗಳ ಜನರು ಅಂಕಸಂದ್ರ, ಮಂಚಲದೊರೆ ಗ್ರಾಮ ಪಂಚಾಯ್ತಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಸಂಬಂಧಪಟ್ಟವರು ನಮ್ಮ ಕೆರೆಗಳ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಾರೆ. ಈ ಕಾರಣದಿಂದ ಮತದಾರರು ಮತ್ತು ಆಕಾಂಕ್ಷಿಗಳು ಒಗ್ಗಟ್ಟಾಗಿ ಚುನಾವಣೆ ಬಹಿಷ್ಕಾರಿಸಲು ನಿರ್ಧಸಿದ್ದು ,ಕೊಡಲೇ ಅಧಿಕಾರಿಗಳು ಸರ್ಕಾರದ ಗಮನ ಸಳೆದು ಹೇಮಾವತಿ ಹರಿಸುವ ಕಾಮಗಾರಿಗೆ ಚಾಲನೆ ನೀಡಬೇಕು. ಇಲ್ಲದಾದಲಿ ಯಾವುದೇ ಕಾರಣಕ್ಕೂ ಚುನವಣೆಗೆ ಉಮೇದುವಾರಿಕೆ ಸಲ್ಲಿಸುವುದಿಲ್ಲ ಎಂದು ಶಾಂತಿಯುತ ಹೋರಾಟ ನಡೆಸುತ್ತಿರುವ ಗ್ರಾಮಸ್ಥರ ಬಳಿ ಬಂದ ಉಪವಿಭಾಗಧಿಕಾರಿ ಅಜಯ್ ಅವರಿಗೆ ಹೇಳಿದರು.
ನಿಮ್ಮಗಳ ಹೋರಾಟಕ್ಕೆ ಅರ್ಥವಿದೆ, ಅದರೆ ನೀವುಗಳು ನಿಮ್ಮ ಜನಪ್ರನಿಧಿಗಳನ್ನು ಆಯ್ಕೆ ಮಾಡಿಕೊಂಡು ಹೋರಾಟ ಮಾಡುವುದರಿಂದ ಹೆಚ್ಚಿನ ಅನಕೂಲವಾಗುತ್ತಾದೆ. ಸರ್ಕಾರ ಈಗ ಕೋವಿಡ್‍ನಿಂದ ಬಹಳ ಸಂಕಷ್ಟದಲ್ಲಿದೆ. ನಿಮ್ಮ ಪಕ್ಕದ ತಾಲ್ಲೂಕಿನಲಿಯೇ ನೀರಿನ ಸಮಸ್ಯೆಯಿಂದ ಅನೇಕ ರೀತಿಯ ತೊಂದರೆಯಿದೆ. ಅದರೆ ಇಲ್ಲಿನ ಸುತ್ತಮುತ್ತಲಿನ ಪರಿಸರ ಚೆನ್ನಾಗಿದೆ. ಅಂದ ಮಾತ್ರಕ್ಕೆ ನೀರಿನ ಸಮಸ್ಯೆ ಇಲ್ಲ ಎಂದು ಹೇಳುತ್ತಿಲ್ಲ. ಡಿ 30 ಕ್ಕೆ ಗ್ರಾಪಂಗಳ ಫಲಿತಾಂಶ ಪ್ರಕಟವಾಗುತ್ತದೆ. ಆನಂತರ ಅಧ್ಯಕ್ಷ.ಉಪಾಧ್ಯಕ್ಷರ ಆಯ್ಕೆ ಮಾಡಿಕೊಂಡು ನಿಮ್ಮಗಳ ಹೋರಾಟ ಮಾಡಿಕೊಳ್ಳಿ. ಹೋರಾಟ ಪ್ರಜಾಪ್ರಭತ್ವ ಹಕ್ಕಾಗಿದೆ. ನಾನು ಇದರ ಬಗ್ಗೆ ಸರ್ಕಾರಕ್ಕೆ ವರದಿ ಮಾಡುತ್ತೇನೆ. ದಯವಿಟ್ಟು ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಿಕೊಳ್ಳಿ ಎಂದು ಉಪವಿಭಾಗಾಧಿಕಾರಿಗಳು ಹೇಳಿದರು.
ನಾವು ಯಾವುದೇ ಕಾರಣಕ್ಕೂ ನಮಗೆ ನ್ಯಾಯ ಸೀಗುವರೆಗೂ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ, ಬಹಿಷ್ಕಾರ ಹಾಕುತ್ತೇವೆ ಎಂದು ಹೋರಾಟಗಾರರು ಒಮ್ಮತದಿಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹೋರಾಟದಲ್ಲಿ ಮಾಜಿ ಗ್ರಾಪಂ ಆದ್ಯಕ್ಷ ನಾಗರಾಜು. ಗುರುಲಿಂಗಯ್ಯ, ಜಿ.ಎಂ.ಶಿವಲಿಂಗಯ್ಯ, ದೇವರಹಳ್ಳಿ ಮಂಜುನಾಥ್, ಗಂಗಾಧರಪ್ಪ, ಮಂಜಣ್ಣ, ವೆಂಕಟೇಶ್, ಆನಂದ್, ಕೆ.ಆರ್.ಗೌಡ್, ಪ್ರಕಾಶ್ ಹಾಗು ಇನ್ನಿತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ