ಬೆಂಗಳೂರು:

ಅನರ್ಹ ಬಿಪಿಎಲ್ ಕಾರ್ಡ್ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಇಲಾಖೆ ಆನರ್ಹ ಕಾರ್ಡ್‌ದಾರರ ಮಾಹಿತಿ ನೀಡಿದರೆ 400 ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ.
ಸಧ್ಯ ಆ ಅನರ್ಹ ಕಾರ್ಡ್‌ಗಳನ್ನ ಗುರುತಿಸಲು ರಾಜ್ಯ ಸರ್ಕಾರ ಮಸ್ತ್ ಪ್ಲ್ಯಾನ್ ಮಾಡಿದ್ದು, ನಕಲಿ ದಾಖಲೆಗಳನ್ನ ನೀಡಿ, 12 ಲಕ್ಷ ಬಿಪಿಎಲ್ ಕಾರ್ಡ್’ಗಳನ್ನ ಪಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಿದೆ.
ಅನರ್ಹ ಬಿಪಿಎಲ್ ಕಾರ್ಡ್ ಪಡೆದಿರುವವರ ವಿರುದ್ಧ ಕ್ರಮಕ್ಕೆ ಮುಂದಾದ ಇಲಾಖೆ, ಅನರ್ಹರಿಗೆ ಮಾರ್ಚ್ ಅಂತ್ಯದೊಳಗಾಗಿ ಕಾರ್ಡ್’ಗಳನ್ನ ಮರಳಿಸುವಂತೆ ಕಾಲಾವಕಾಶ ನೀಡಿದೆ. ಆರ್ಥಿಕವಾಗಿ ಸದೃಢರಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರ ಮಾಹಿತಿ ನೀಡಿದರೆ ಅಂತಹವರಿಗೆ 400 ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








