ವರನಿಗೆ ವಧುವಿಂದ ತಾಳಿ : ವಿಶೇಷ ಮಧುವೆ !!!

ವಿಜಯಪುರ:

      ಸಾಮಾನ್ಯವಾಗಿ ವರ ವಧುವಿಗೆ ತಾಳಿ ಕಟ್ಟುತ್ತಾನೆ. ಆದ್ರೆ ನಾಲತವಾಡ ಪಟ್ಟಣದಲ್ಲಿ ಹಿರಿಯರು ವಧುವಿನಿಂದಲೇ ವರನಿಗೆ ಮಾಂಗಲ್ಯಧಾರಣೆ ಮಾಡಿರುವ ಘಟನೆ ವಿಜಯಪುರದ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಹಳ್ಳೂರ ಪ್ಯಾಲೇಸ್​ನಲ್ಲಿ ನಡೆದಿದೆ.

      ಹೌದು, ಸೋಮವಾರ ದುದ್ದಗಿ, ಬರಗುಂಡಿ ಮನೆತನದಿಂದ ಹಮ್ಮಿಕೊಂಡ ಕಲ್ಯಾಣ ಮಹೋತ್ಸವದಲ್ಲಿ ವರ ಪ್ರಭುರಾಜಗೆ ವಧು ಅಂಕಿತಾ ಹಾಗೂ ವರ ಅಮಿತ್ ಗೆ ವಧು ಪ್ರಿಯಾ ಅವರು ಮಾಂಗಲ್ಯ ಧಾರಣೆ ಮಾಡಿ ವಿಶಿಷ್ಟ ರೀತಿಯಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟರು.

      ತಾಳಿಯ ಜೊತೆ ರುದ್ರಾಕ್ಷಿ ಪೋಣಿಸಿ ಕಟ್ಟುವ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಿದರು. ಅಪ್ಪಟ ಬಸವ‌ ಧರ್ಮದ ತತ್ವದ ಅಡಿಯಲ್ಲಿ ಮದುವೆ ಕಾರ್ಯ ನಡೆದಿದೆ. ವಿಶೇಷ ಅಂದರೆ ಶುಭ ಮುಹೂರ್ತವನ್ನು ನೋಡದೆ ಮದುವೆ ಆಚರಣೆ ಮಾಡಲಾಗಿದೆ.

      ವಧು-ವರರಿಗೆ ಅಕ್ಷತೆ ಬದಲು ಪುಷ್ಪವೃಷ್ಟಿಯಿಂದ ಆಶೀರ್ವಾದ ಮಾಡಲಾಯಿತು. ಮದುವೆಗೆ ಬಂದವರಿಗೆ ಬಸವಣ್ಣನವರ ಕುರಿತಾದ ವಚನ‌ಸುಧೆ, ವಚನವರ್ಷ ಪುಸ್ತಕಗಳ ವಿತರಣೆ ಮಾಡಲಾಯಿತು.

       ಇಳಕಲ್ಲದ ಗುರುಮಹಾಂತೇಶ್ವರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶರಣರು, ಲಿಂಗಸೂರಿನ ವಿಜಯ ಮಹಾಂತೇಶ ಮಠದ ಸಿದ್ಧಲಿಂಗ ಶ್ರೀಗಳು‌ ಸೇರಿದಂತೆ ಅನೇಕ‌ ಗಣ್ಯರು ವಿಶೇಷ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ನವ ಜೋಡಿಗಳನ್ನು ಹರಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap