ಬೆಂಗಳೂರು :
ದೇವೇಗೌಡ್ರು ಮಗನ ಪರವಾಗಿ ಮಾತನಾಡೋ ಬದಲು ರೈತರ ಪರವಾಗಿ ಮಾತಾಡೋದನ್ನ ಇನ್ನಾದ್ರು ಕಲಿಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ್ರು ಮಗನ ಪರವಾಗಿ ಮಾತನಾಡೋ ಬದಲು ರೈತರ ಪರವಾಗಿ ಮಾತಾಡೋದನ್ನ ಇನ್ನಾದ್ರು ಕಲಿಯಲಿ. ರೇವಣ್ಣ ಅವರು ನೋಟ್ ಮುದ್ರಣ ಮಷೀನ್ ಇಟ್ಕೊಂಡಿದ್ದೀವಾ ಅಂತ ಕೇಳ್ತಾರೆ. ಮಷೀನ್ ಇಟ್ಕೊಂಡಿದ್ದೀರ ಅಂತ ನಾವು ಹೇಳಿದ್ವಾ? ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ಸಾಲ ಮನ್ನಾ ಮಾಡ್ತೀವಿ ಅಂತ ಬೊಬ್ಬೆ ಹೊಡೆದವ್ರು ನೀವೇ ತಾನೆ? ಇವತ್ತು ಸಾಲ ಮನ್ನಾ ಆಗದೆ ರೈತರ ಮನೆಗಳಿಗೆ ನೋಟಿಸ್ ಹೋಗಿ , ವಿಷ ತೆಗೆದುಕೊಳ್ಳೋ ಸ್ಥಿತಿ ಬಂದು ರೈತರು ಸಾಯುತ್ತಿದ್ದಾರೆ. ಅವರ ಜೀವದ ಜೊತೆ ಸಿಎಂ ಚೆಲ್ಲಾಟವಾಡ್ತಿದ್ದಾರೆ ಎಂದು ಹರಿಹಾಯ್ದರು.
ಮುಖ್ಯಮಂತ್ರಿಯಾಗಿ ಪ್ರತಿ ತಿಂಗಳು ರೈತರ ಸಭೆ ನಡೆಸುತ್ತೇನೆ ಎಂದು ಹೇಳಿದ್ದೀರಿ. ಆದರೆ ಇದುವರೆಗೂ ನೀವು ಸಭೆ ಮಾಡಲಿಲ್ಲ. ರೈತರ ಉತ್ಪನ್ನಗಳನ್ನು ಖರೀದಿಸಲು ನಿಮಗೆ ಯೋಗ್ಯತೆ ಇಲ್ಲ. ರೈತರಿಗೆ ಕಬ್ಬಿನ ಬೆಲೆ ಬಗ್ಗೆ ಕೇಂದ್ರ ಕಬ್ಬಿನ ಕಾರ್ಖಾನೆಗೆ ಅನೇಕ ಸಹಕಾರ ನೀಡಿದರೂ ಸಹ ಸರಿಯಾದ ಬೆಂಬಲ ಬೆಲೆ ನೀಡಲು ನೀವು ಸಿದ್ದರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಅಧಿವೇಶನದ ಒಳಗೆ ಸಿಎಂ ಕುಮಾರಸ್ವಾಮಿ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ರೆ ಉಗ್ರ ಹೋರಾಟ ಮಾಡ್ತೀವಿ. ಸದನದ ಒಳಗೆ, ಸದನದ ಹೊರಗೂ ಪ್ರತಿಭಟನೆ ನಡೆಯಲಿದೆ ಅಂತ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ