ಅಧಿಕಾರಿಗಳಿಗೆ ಶನಿವಾರ, ಭಾನುವಾರವೂ ರಜೆ ಕಟ್!!

ಬೆಂಗಳೂರು:

       ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿ ಯನ್ನು ಸಮರ್ಥವಾಗಿ ನಿಭಾಯಿಸಲು ಸಂಬಂಧ ಪಟ್ಟ ಇಲಾಖೆಗಳ ಎಲ್ಲ ಹಂತದ ಅಧಿಕಾರಿಗಳು 3 ತಿಂಗಳವರೆಗೆ ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.

       ರಾಜ್ಯದಲ್ಲಿ ಸರಿಯಾದ ಕಾಲಕ್ಕೆ ಮಳೆಯಾಗದೇ ಬರಗಾಲ ಎದುರಿಸುವಂತ ಪರಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಮಗ್ರ ಬರ ನಿರ್ವಹಣೆಯನ್ನು ಮಾಡುವ ಸಲುವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ  ಸರ್ಕಾರಿ ನೌಕರರ ಮುಂದಿನ ಮೂರು ತಿಂಗಳ ರಜೆಯನ್ನೇ ಕಟ್ ಮಾಡಿ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ.

      ಸಿಎಂ ನೇತೃತ್ವದಲ್ಲಿ ನಡೆದ ಬರ ನಿರ್ವಹಣಾ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಸಿಎಂ ತಿಳಿಸಿದ್ದು, ಯಾವುದೇ ಹಂತದ ಅಧಿಕಾರಿಗಳೂ ಶನಿವಾರ, ಭಾನುವಾರ ನೆಪ ಹೇಳದೇ ಬರ ಪರಿಹಾರ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ. ಬರ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡುವುದು, ಕುಡಿಯುವ ನೀರು ಸರಬರಾಜಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.

      ರಾಜ್ಯದಲ್ಲಿ ಸರಿಯಾದ ಕಾಲಕ್ಕೆ ಮಳೆಯಾಗದೇ ಬರಗಾಲ ಎದುರಿಸುವಂತ ಪರಸ್ಥಿತಿ ನಿರ್ಮಾಣವಾಗಿದೆ. ಇದಷ್ಟೇ ಅಲ್ಲದೇ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದಾಗ ಆಡಳಿತ ಯಂತ್ರ ಕುಸಿದಿದೆ. ಹೀಗಾಗಿ ಚುರುಕಾಗಿ ಕೆಲಸ ಮಾಡುವ ತುರ್ತು ಬಿಜೆಪಿ ನೇತೃತ್ವದ ಸರ್ಕಾರ ಮೇಲಿದೆ. ಈ ಕಾರಣಕ್ಕಾಗಿ ರಾಜ್ಯದ ಬರ ನಿರ್ವಹಣೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕಿದೆ. ಹೀಗಾಗಿ ಶನಿವಾರ, ಭಾನುವಾರವೂ ರಜೆ ತೆಗೆದುಕೊಳ್ಳದಂತೆ ಕೆಲಸ ಮಾಡಿ ತೋರಿಸುವಂತೆ ಸಿಎಂ ಸೂಚಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap