‘ನನಗೆ ಟ್ವಿಟರ್ ಬಗ್ಗೆ ಹೆಚ್ಚು ಗೊತ್ತಿಲ್ಲ’-ಉಚ್ಚಾಟನೆ ಬಗ್ಗೆ ಮಹೇಶ್​ ಸ್ಪಷ್ಟನೆ!

ಬೆಂಗಳೂರು:

       ನನಗೆ ಟ್ವಿಟರ್ ಬಗ್ಗೆ ಹೆಚ್ಚು ಗೊತ್ತಿಲ್ಲ. ಸಂವಹನ ಕೊರತೆಯಿಂದ ಈ ರೀತಿಯಾಗಿದೆ ಎಂದು ಕೊಳ್ಳೇಗಾಲ ಮೀಸಲು ಕ್ಷೇತ್ರದ ಶಾಸಕ ಎನ್​.ಮಹೇಶ್​ ಸ್ಪಷ್ಟನೆ ನೀಡಿದ್ದಾರೆ.

       ಶಾಸಕ ಎನ್​.ಮಹೇಶ್​​ ಅವರನ್ನು ಬಿಎಸ್​ಪಿ ಪಕ್ಷದಿಂದ ವಜಾ ಮಾಡಿದ ಹಿನ್ನೆಲೆ, ಅವರು ಇಂದು ಸುದ್ದಿಗೋಷ್ಠಿ ಕರೆದು ನಿನ್ನೆ ಸದನಕ್ಕೆ ಗೈರಾದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಬಿಎಸ್​​ಪಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

      ನನಗೆ ಟ್ವಿಟರ್​ ಆಗಲಿ ಸಾಮಾಜಿಕ ಜಾಲತಾಣ ಬಳಕೆ ಬಗ್ಗೆ ಹೆಚ್ಚು ಗೊತ್ತಿಲ್ಲದಿರುವುದರಿಂದ ನನಗೆ ಬೆಹನ್​ಜಿ ಸೂಚನೆ ನೀಡಿರುವುದು ತಿಳಿದಿರಲಿಲ್ಲ. ನಮ್ಮ ಹೈಕಮಾಂಡ್​ ಆದೇಶವನ್ನು ನಾನೆಂದೂ ಉಲ್ಲಂಘನೆ ಮಾಡಿಲ್ಲ. ಸದನಕ್ಕೆ ಹೋಗಿ ಎಚ್​.ಡಿ.ಕುಮಾರಸ್ವಾಮಿಗೆ ಅವರಿಗೆ ಬೆಂಬಲ ನೀಡುವಂತೆ ಬಿಎಸ್​ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಮಾಡಿದ್ದ ಟ್ವೀಟ್​, ಸಂವಹನದ ಕೊರತೆಯಿಂದ ನನಗೆ ತಿಳಿದಿಲ್ಲ. ನನಗೆ ಟ್ವಿಟರ್ ಬಗ್ಗೆ ಹೆಚ್ಚು ಗೊತ್ತಿಲ್ಲದಿದ್ದರಿಂದ ಈ ರೀತಿಯಾಗಿದೆ ಎಂದು ತಿಳಿಸಿದ್ದಾರೆ. 

      ಪಕ್ಷದಿಂದ ಉಚ್ಚಾಟನೆ ಮಾಡಿದ ಸುದ್ದಿ ಬೆಳಗ್ಗೆ ಮುದ್ರಣ ಮಾಧ್ಯಮದಿಂದ ನನಗೆ ತಿಳಿಯಿತು. ಬಿಎಸ್​ಪಿ ಅಭ್ಯರ್ಥಿಯಾಗಿ ಜೆಡಿಎಸ್​ ಬೆಂಬಲದೊಂದಿಗೆ ನಾನು ಚುನಾವಣೆಯಲ್ಲಿ ಗೆದ್ದೆ. ಬಳಿಕ ಕಾಂಗ್ರೆಸ್​-ಜೆಡಿಎಸ್​​​ ಮೈತ್ರಿ ಸರ್ಕಾರ ರಚನೆಯಾಯಿತು. ಮಾಯಾವತಿ ಅವರ ಸೂಚನೆ ಮೇರೆಗೆ ಸಂಪುಟದಲ್ಲಿ ನನಗೂ ಸಚಿವ ಸ್ಥಾನ ನೀಡಿದರು. ನಂತರ ದಿನಗಳಲ್ಲಿ ಮಾಯಾವತಿ ಅವರು ನನ್ನನ್ನು ದೆಹಲಿಗೆ ಕರೆಸಿಕೊಂಡು ಮಹಾಘಟಬಂಧನ್ ನಿರ್ಧಾರಕ್ಕೆ ಅನುಗುಣವಾಗಿ ಕಾಂಗ್ರೆಸ್​ ನಡೆದುಕೊಳ್ಳುತ್ತಿಲ್ಲ. ಹೀಗಾಗಿ ಕಾಂಗ್ರೆಸ್​ ಇರುವ ಸಂಪುಟದಲ್ಲಿ ನೀನು ಇರುವುದು ಬೇಡ ರಾಜೀನಾಮೆ ನೀಡು ಎಂದು ಹೇಳಿದರು. ನಾನು ಮರು ಯೋಚಿಸದೇ ರಾಜೀನಾಮೆ ನೀಡಿ ಸಂಪುಟದಿಂದ ಹೊರಬಂದೆ ಎಂದು ತಿಳಿಸಿದರು.       

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link