ಅನರ್ಹರಿಗೆ ಉಪಚುನಾವಣೆಯಲ್ಲಿ ಅರ್ಹತೆ ನೀಡಲು ಬಿಎಸ್ವೈ ಪ್ಲಾನ್!!?

ಬೆಂಗಳೂರು :

       ಶಾಸಕ ಸ್ಥಾನಕ್ಕೆ ರಾಜೀನಾಮೆ ಅನರ್ಹರಾಗಿರುವ 17 ಶಾಸಕರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಿಹಿಸುದ್ದಿ ನೀಡಿದ್ದು, ಉಪಚುನಾವಣೆಯಲ್ಲಿ ಅನರ್ಹ ಶಾಸಕರ ಗೆಲುವಿಗಾಗಿ ಬಿಗ್ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ.

      ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಶಾಸಕರು ಅರ್ಜಿ ಸಲ್ಲಿಸಿದ್ದು, ಈವರೆಗೂ ಯವುದೇ ವಿಚಾರಣೆ ನಡೆದಿಲ್ಲ. ಹೀಗಾಗಿ ಅನರ್ಹ ಶಾಸಕರನ್ನು ಚಿಂತೆಗೀಡುಮಾಡಿದೆ. ಅನರ್ಹ ಶಾಸಕರು ಸುಪ್ರೀಂಕೋರ್ಟ್ ಆದೇಶದ ನಿರೀಕ್ಷೆಯಲ್ಲಿದ್ದಾರೆ. ಶಾಸಕರ ಪರ ತೀರ್ಪು ವಿಶ್ವಾಸದ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ವೈ ಮುಂದೆ ಎದುರಾಗುವ 17 ಕ್ಷೇತ್ರಗಳಲ್ಲೂ ಅನರ್ಹ ಶಾಸಕರ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

      ಉಪಸಮರಕ್ಕೆ ಈಗಾಗಲೇ ಸಿದ್ಧತೆ ನಡೆಸಿರುವ ಬಿಜೆಪಿ, ಅನರ್ಹ ಶಾಸಕರ ಬಗ್ಗೆ ಸ್ಥಳೀಯವಾಗಿ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ 17 ಕ್ಷೇತ್ರಗಳ ಮುಖಂಡರ ಜೊತೆ ಬಿಎಸ್ ವೈ ಮಹತ್ವದ ಸಭೆ ನಡೆಸಿ, ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲರೂ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ರಾಜೀನಾಮೆ ನೀಡಿದ ಶಾಸಕರ ಗೆಲುವಿಗೆ ಉಪ ಚುನಾವಣೆಯಲ್ಲಿ ಶ್ರಮಿಸಬೇಕು ಎಂದು ತಿಳಿಸಲಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link