ಶಿವಮೊಗ್ಗ:
ನವೆಂಬರ್ 3 ರಂದು ನಡೆಯಲಿರುವ ಲೋಕಸಭಾ ಮಿನಿ ಉಪಚುನಾವಣೆ ಸಮರದ ಹಿನ್ನೆಲೆಯಲ್ಲಿ ಶಿವಮೊಗ್ಗ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗ ಕ್ಷೇತ್ರ ಬಿಟ್ಟು ಕದಲದೆ, ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದಾರೆ.
ಶಿವಮೊಗ್ಗ ಕ್ಷೇತ್ರದಲ್ಲಿ ಬಿಎಸ್‍ವೈ ಅವರನ್ನು ಸೀಮಿತಗೊಳಿಸುವ ಸಲುವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸದರಿ ಕ್ಷೇತ್ರದಲ್ಲಿ ಮೂರು ದಿನ ಠಿಕಾಣಿ ಹೂಡುವ ಮೂಲಕ ಬಿಎಸ್‍ವೈ ಅವರನ್ನು ಸ್ವಕ್ಷೇತ್ರ ಬಿಟ್ಟು ಕದಲದಂತೆ ಮಾಡುವುದೇ ಹೆಚ್‍ಡಿಕೆ ತಂತ್ರವಾಗಿದೆ. ಬಿಜೆಪಿ ಪ್ರಾಬಲ್ಯವಿರುವೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿರುಸಿನ ಪ್ರಚಾರ ನಡೆಸಲು ಸಜ್ಜಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ