ಹೊಸ ಸಂಪ್ರದಾಯಕ್ಕೆ ನಾಂದಿಯಾಗುವುದೇ ನಾಳಿನ ಬಜೆಟ್ !!?

ಬೆಂಗಳೂರು:

      ನಾಳೆ ದೋಸ್ತಿ ಸರಕಾರದ ಎರಡನೇ ಬಜೆಟ್ ನಾಳೆ ಮಂಡನೆಯಾಗಲಿದ್ದು,  ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ ಎಂದು ಹೇಳಲಾಗುತ್ತಿದೆ.

      ಹೌದು, ನಾಳೆ ಮಂಡನೆಯಾಗುವ ಬಜೆಟ್ ಪ್ರತಿಯನ್ನು ಸಿಎಂ ಹೊರತು ಪಡಿಸಿ ಇನ್ಯಾರಿಗೂ ನೀಡದೇ ಇರುವುದಕ್ಕೆ ಸಿಎಂ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸ್ಪೀಕರ‍್ ಗೆ ಮನವಿ ಸಿಲ್ಲಿಸಿದ್ದು, ಸಿಎಂ ಮನವಿಗೆ ಸ್ಪೀಕರ್ ಅಸ್ತು ಎಂದಿದ್ದಾರೆ.

      ಈ ಮಾದರಿಯನ್ನು ಲೋಕಸಭೆಯಲ್ಲಿ ಅನುಸರಿಸಲಾಗುತ್ತಿದೆ. ಅದೇ ಪದ್ದತಿಗಳನ್ನು ರಾಜ್ಯ ವಿಧಾನಸಭೆಯಲ್ಲೂ ಆಚರಣೆಗೆ ತರಲು  ನಿರ್ಧರಿಸಿದ್ದು, ವಿಧಾನಪರಿಷತ್‍ನಲ್ಲೂ ಇದೇ ವ್ಯವಸ್ಥೆ ಜಾರಿಗೆ ಬರಲಿದೆ ಎನ್ನಲಾಗಿದೆ.

      ಇಂದು ಬೆಳಗ್ಗೆ ಈ ಬಗ್ಗೆ ಎಲ್ಲಾ ಶಾಸಕರಿಗೂ ಸುತ್ತೋಲೆ ಕಳುಹಿಸಲಾಗಿದ್ದು, ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬಜೆಟ್ ಪುಸ್ತಕವನ್ನು ಪೂರ್ತಿಯಾಗಿ ಓದಿ ಮುಗಿಸಿದ ಬಳಿ ಶಾಸಕರಿಗೆ ಪ್ರತಿಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ವರೆಗಿನ ಸಂಪ್ರದಾಯದಂತೆ ಹಣಕಾಸು ಸಚಿವರು ಬಜೆಟ್ ಓದಲು ಆರಂಭಿಸುತ್ತಿದ್ದಂತೆ ಬಜೆಟ್‍ನ ಪ್ರತಿಗಳನ್ನು ಶಾಸಕರಿಗೆ ಮತ್ತು ಮಾಧ್ಯಮದವರಿಗೆ ನೀಡಲಾಗುತ್ತಿತ್ತು. ಹಣಕಾಸು ಸಚಿವರು ಬಜೆಟ್ ಓದುತ್ತಿದ್ದಂತೆ ಬಜೆಟ್ ಪುಸ್ತಕವನ್ನು ಓದಿಕೊಂಡು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತಿತ್ತು. ಇದೇ ಮೊದಲ ಬಾರಿ ಹೊಸ ಸಂಪ್ರದಾಯ ಹುಟ್ಟು ಹಾಕುವ ಮೂಲಕ ಬಜೆಟ್ ಭಾಷಣ ಕೇಳುವ ಅವಕಾಶ ಮಾಡಿಕೊಡಲಾಗುತ್ತಿದೆ.

      ಬಜೆಟ್ ಮಂಡನೆ ಪೂರ್ಣವಾಗುವ ಮುನ್ನವೇ ಬಜೆಟ್ ಪ್ರತಿಗಳು ಸಿಕ್ಕರೆ ಪ್ರತಿಪಕ್ಷಗಳ ಶಾಸಕರು ಹರಿದು ಹಾಕಿದರೆ ಅದು ಸರಕಾರಕ್ಕೆ ಮುಜುಗರವಾಗಲಿದೆ ಈ ಕಾರಣಕ್ಕೆ ನಾಳೆ ಸಿಎಂ ಹೊರತುಪಡಿಸಿ ಬೇರೆ ಯಾರಿಗೂ ಬಜೆಟ್ ಕಾಪಿ ಸಿಗುವುದಿಲ್ಲ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap