ಬೆಂಗಳೂರು:
ಹೆಬ್ಬಾಳದ ಕೆಂಪಾಪುರ ಬಡಾವಣೆಯ ನಾರಾಯಣಪ್ಪ ಕಾಲೋನಿಯಲ್ಲಿ 4 ಅಂತಸ್ತಿನ ಕಟ್ಟಡವೊಂದು ಕ್ಷಣ ಕ್ಷಣಕ್ಕೂ ವಾಲುತ್ತಿರುವುದು ಸುತ್ತಮುತ್ತಲಿನ ನಿವಾಸಿಗಳಲ್ಲಿ ಆಂತಕ ಸೃಷ್ಟಿ ಮಾಡಿದೆ.
ಹೆಬ್ಬಾಳದ ಕೆಂಪಾಪುರ ಮುಖ್ಯರಸ್ತೆಯಲ್ಲಿ ಸಮ್ಸ್ ಶಾಲೆ ಬಳಿ ಇರುವ ನಾಲ್ಕು ಅಂತಸ್ತಿನ ಹರ್ಷಿತ್ ಪಿ.ಜಿ ಕಟ್ಟಡ ಇದಾಗಿದೆ. ಕಟ್ಟಡದ ಪಕ್ಕದಲ್ಲಿ ಕಳೆದ ಒಂದು ತಿಂಗಳಿಂದ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಈ ಮೊದಲೇ ಕಟ್ಟಡಕ್ಕೆ ಹಾನಿಯಾಗುವ ಸೂಚನೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಮನೆ ಮಾಲೀಕರ ಗಮನಕ್ಕೆ ತರಲಾಗಿತ್ತು. ಆದರೆ, ಮನೆ ಆ ಮನೆ ಮಾಲೀಕ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲವೆಂದು ಪಿ.ಜಿ ಮಾಲೀಕ ದೂರಿದ್ದಾರೆ.
ಇನ್ನು ಕಟ್ಟಡ ವಾಲಿರುವ ಕಾರಣ ತಕ್ಷಣವೇ ಜನರನ್ನು ಹೊರಕ್ಕೆ ಕಳುಹಿಸಲಾಗಿದ್ದು, ಳಕ್ಕ ಅಗ್ನಿಶಾಮಕ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
