ಚಿಕ್ಕಮಗಳೂರು:
ಬುಲೆರೋ ವಾಹನವೊಂದು ಭದ್ರಾ ನಾಲೆಗೆ ಬಿದ್ದು, ಮಹಿಳೆ ನೀರುಪಾಲಾಗಿರುವ ದುರ್ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪ ಸಂಭವಿಸಿದೆ.
ಸಂತೋಷ್ ಹಾಗೂ ಅವರ ಪತ್ನಿ ಸರ್ವಮಂಗಳ ಎಂಬುವರು ರಂಗನಾಥ ಸ್ವಾಮಿ ದೇವಾಲಯಕ್ಕೆ ಹೋಗಿ ಬರುತ್ತಿದ್ದ ವೇಳೆ ಈ ಅವಘಡ ನಡೆದಿದೆ.
ಸಂತೋಷ್ ಕಾರಿನ ಬಾಗಿಲು ತೆರೆದು ನಾಲೆಯಿಂದ ಮೇಲೆ ಬಂದಿದ್ದು, ಅವರ ಪತ್ನಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಾಹನವನ್ನು ಕಾಲುವೆಯಿಂದ ಹೊರಕ್ಕೆ ತೆಗೆಯಲಾಗಿದೆ. ಸರ್ವಮಂಗಳಾ ಅವರಿಗಾಗಿ ಕಾಲುವೆಯಲ್ಲಿ ಶೋಧ ಕಾರ್ಯಾಚರಣೆ ಶುರುವಾಗಿದೆ.
ಬ್ರೇಕ್ ವಿಫಲವಾಗಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಕಾಲುವೆಗೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
