ಮಧುಗಿರಿ : ಭೀಕರ ಅಪಘಾತದಲ್ಲಿ ಮದುಮಗನ ಚಿಕ್ಕಪ್ಪ-ಮಾವ ದುರ್ಮರಣ!!!

 ಮಧುಗಿರಿ :
       ಖಾಸಗಿ ಬಸ್ ಡಿಕ್ಕಿ ಹೊಡೆದು ಮದುವೆ ತಯಾರಿಯಲ್ಲಿದ್ದ ಮಧುಮಗನ ಚಿಕ್ಕಪ್ಪ ಹಾಗೂ ಸೋದರ ಮಾವ ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ತಾಲ್ಲೂಕಿನ ಕಸಬಾ ವ್ಯಾಪ್ತಿಯ ಕವಾಡಿಗರಪಾಳ್ಯದಲ್ಲಿ ಬುಧವಾರ ಸಂಜೆ ನಡೆದಿದೆ.
   
      ತಾಲ್ಲೂಕಿನ ಕವಾಡಿಗರಪಾಳ್ಯದ ನಿವಾಸಿ ಶಿವಣ್ಣ (50) ಹಾಗೂ ಮಧುಗಿರಿ ಪಟ್ಟಣದ ಕವಾಡಿಗರ ಬೀದಿಯ ನಿವಾಸಿ ಬೀರಲಿಂಗಪ್ಪ (55) ಅಪಘಾತದಲ್ಲಿ ಮೃತಪಟ್ಟವರು. ಶಿವಣ್ಣ ಮದುಮಗನ ಸ್ವಂತ ಚಿಕ್ಕಪ್ಪ ಹಾಗೂ ಬೀರಲಿಂಗಪ್ಪ ಸೋದರ ಮಾವ ಎಂದು ತಿಳಿದುಬಂದಿದೆ.
     ಮೃತರು ಶಿವಣ್ಣ ರ ಅಣ್ಣನ ಮಗನ ಆರತಕ್ಷತೆ ಕಾರ್ಯಕ್ರಮ ತಯಾರಿಯಲ್ಲಿದ್ದರು ಎನ್ನಲಾಗಿದ್ದು, ಇಬ್ಬರೂ ಪಟ್ಟಣದಲ್ಲಿ ನಡೆಯುತ್ತಿದ್ದ ಮದುವೆ ಛತ್ರದಿಂದ ಟಿವಿಎಸ್ ಮೊಪೆಡ್ ನಲ್ಲಿ ಕವಾಡಿಗರ ಪಾಳ್ಯಕ್ಕೆ ಹೋಗುವಾಗ, ತುಮಕೂರು – ಮಧುಗಿರಿ ಕೆ ಶಿಫ್ ರಸ್ತೆಯಲ್ಲಿ ಖಾಸಗಿ ಬಸ್ ಮೊಪೆಡ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಶಿವಣ್ಣ ಹಾಗೂ ಬೀರಣ್ಣ ಸ್ಥಳದಲ್ಲಿಯೇ ಅಸುನೀಗಿದ್ದಾರೆ.
 
      ಮಧುಗಿರಿ ಪೊಲೀಸ್ ಠಾಣೆಯ ಸಿಪಿಐ ದಯಾನಂದ ಶೇಗುಣಸಿ ಹಾಗೂ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲಿಸಿದರು.
      
      ಮದುವೆ ಮನೆಯಲ್ಲಿ ಸೂತಕದ ಛಾಯೆ ಉಂಟಾಗಿದ್ದು, ಮದುವೆ ಸಡಗರದಲ್ಲಿದ್ದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

 

Recent Articles

spot_img

Related Stories

Share via
Copy link
Powered by Social Snap