ಮಂಗಳೂರು:

ಖಾಸಗಿ ಬಸ್ಸೊಂದು ಬೈಕೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್‌ರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಗುರುಪುರದಲ್ಲಿ ನಡೆದಿದೆ.
ಮೂಲತಃ ಗದಗ, ಪ್ರಸ್ತುತ ಬೆಳುವಾಯಿ ನಿವಾಸಿಯಾಗಿರುವ ಮಹೇಶ್ ಲಮಾಣಿ (32) ಮೃತಪಟ್ಟ ಪೊಲೀಸ್ ಪೇದೆ. ![]()
ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಬಳಿ ಈ ಅಪಘಾತ ಸಂಭವಿಸಿದೆ. ಕಾರ್ಕಳದಿಂದ ಮಂಗಳೂರಿನತ್ತ ಬರುತ್ತಿದ್ದ ಖಾಸಗಿ ಬಸ್ ಅದೇ ರಸ್ತೆಯಲ್ಲಿ ಬೆಳುವಾಯಿಯಿಂದ ಮಂಗಳೂರಿನತ್ತ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಅತೀ ವೇಗದಲ್ಲಿದ್ದ ಬಸ್ ಮೊದಲು ಪಿಕಪ್ ವಾಹನವೊಂದಕ್ಕೂ ಢಿಕ್ಕಿಯಾಗಿದೆ. ಬಳಿಕ ಬಸ್ ಬೈಕಿಗೆ ಡಿಕ್ಕಿಯಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ಮಹೇಶ್ ಲಮಾಣಿ ಬೈಕ್‌ನಿಂದ ಕೆಳಗೆ ಬಿದ್ದಿದ್ದು, ಇದೇ ವೇಳೆ ಬಸ್ ಲಮಾಣಿ ಮೇಲೆಯೇ ಚಲಿಸಿದೆ. ಇದರ ಪರಿಣಾಮ ಲಮಾಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








