ಮಂಡ್ಯ:

ನವೆಂಬರ್ 3 ರಂದು ನಡೆಯಲಿರುವ ಲೋಕಸಭಾ ಉಪಚುನಾವಣೆಯ 5 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಮಾತನಾಡುತ್ತಿದ್ದ ಅವರು, ಶಿವಮೊಗ್ಗ ಮತ್ತು ಬಳ್ಳಾರಿ ಕ್ಷೇತ್ರಗಳ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಗೆದ್ದಾಗಿದೆ. ಈ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಾಕದಿರುವುದು ನೋಡಿದರೆ, ಅದು ಶಕ್ತವಾಗಿಲ್ಲ ಎಂಬುದಾಗಿದೆ. ಜೆಡಿಎಸ್ ಪಕ್ಷಕ್ಕೆ ಅಧಿಕಾರ ಒತ್ತೆ ಇಟ್ಟಿರುವ ಕಾಂಗ್ರೆಸ್ ಪಕ್ಷವು ಅಧಿಕಾರ ನಡೆಸಲಾಗದೆ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಟ್ಟಿರುವುದು ನಾಚಿಗೇಡು ಎಂದು ಕಾಂಗ್ರೆಸ್‍ಅನ್ನು ಮೂದಲಿಸಿದರು.
ನನಗೆ ನನ್ನ ಮಗನ ಶಿವಮೊಗ್ಗ ಕ್ಷೇತ್ರಕ್ಕಿಂತ ಮಂಡ್ಯ ಕ್ಷೇತ್ರ ನನಗೆ ಮುಖ್ಯ ಏಕೆಂದರೆ, ನಾನು ಮಂಡ್ಯದ ಬೂಕನಕೆರೆಯಲ್ಲಿ ಹುಟ್ಟಿದವನಾದರೂ ಕೂಡಾ, ಇಲ್ಲಿನ ಜನ ನನ್ನನ್ನು ಆಶೀರ್ವಾದ ಮಾಡಲಿಲ್ಲ. ಆದರೆ, ಶಿಕಾರಿಪುರದ ಜನ ಮಾತ್ರ ನನ್ನ ಕೈ ಬಿಡಲಿಲ್ಲ. ಶಾಸಕನಾಗಿ, ಸಂಸದನಾಗಿ, ಮುಖ್ಯಮಂತ್ರಿಯನ್ನಾಗಿ ನನ್ನನ್ನು ಮಾಡಿದ್ದಾರೆ. ಸಾಲಮನ್ನಾ ವಿಚಾರವಾಗಿ ಮುಖ್ಯಮಂತ್ರಿಗಳು ವಿನಾಕಾರಣ ಪ್ರದಾನಿ ಅವರನ್ನು ದೂರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
