ತುಮಕೂರು ಅಪಘಾತ : ‘ಮಧ್ಯಪಾನ’ ಮಾಡಿದ್ರಾ ಶಾಸಕ ಸಿ.ಟಿ.ರವಿ!!?

ತುಮಕೂರು :

      ಬಿಜೆಪಿ ಶಾಸಕ ಸಿ.ಟಿ. ರವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಕುಣಿಗಲ್ ತಾಲೂಕಿನ ಆಲಪ್ಪನಗುಡ್ಡ ಬಳಿ ನಡೆದಿದೆ.

ತುಮಕೂರು:ಸಿ ಟಿ ರವಿ ಕಾರು ಅಪಘಾತ : ಇಬ್ಬರ ಸಾವು…!

      ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೃತರ ಗೆಳೆಯ ಚೇತನ್, ಅಪಘಾತವಾದ ವೇಳೆ ಶಾಸಕ ಸಿ.ಟಿ. ರವಿ ಕುಡಿದಿದ್ದರು. ಅವರ ಮಾತು, ಹಾವ-ಭಾವದಿಂದ ಪಾನಮತ್ತರಾಗಿದ್ದರು ಎಂದು ನಮಗೆ ತಿಳಿಯಿತು ಎಂದು ಗಂಭೀರ ಆರೋಪ ಮಾಡಿದ್ದಾರೆ.

      ಸಿ.ಟಿ.ರವಿ ಅವರ ಕಾರಿನಲ್ಲಿ 3,4 ಜನರಿದ್ದರು. ಸಿ.ಟಿ.ರವಿ ಅವರು ಕುಡಿದಿದ್ದರು. ಬಳಿಕ ನಮ್ಮ ಬಳಿ ಬಂದು ರೇಗಾಡಿದ್ರು, ಕಾರು ಹತ್ತು ನಿನಗೆ ಎಲ್ಲಿ ಟ್ರಿಟ್ ಮೆಂಟ್ ಕೊಡಿಸಬೇಕು ಅಲ್ಲಿ ಕೊಡಿಸ್ತಿನಿ ಎಂದು ಗದರಿದರು. ಪೊಲೀಸರು ಅವರ ಕಾರನ್ನು ವಶಕ್ಕೆ ಪಡೆದುಕೊಂಡಿಲ್ಲ, ನಮ್ಮನಷ್ಟೇ ವಿಚಾರಿಸಿದರು ಎಂದು ಅಸಮಾಧಾನ ಹೊರಹಾಕಿದ್ದಾನೆ.

       ಘಟನೆ ಕುರಿತು ಸಿ.ಟಿ. ರವಿ ವಿರುದ್ಧ ಕುಣಿಗಲ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 337, 304 ಅಡಿ ಎಫ್ ಐಆರ್ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ