ರಾಯಚೂರು :

2 ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಮೂವರು ಸ್ವಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಮಂತ್ರಾಲಯ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಮೃತರನ್ನು ಅಭಿಷೇಕ, ಬಸವರಾಜ, ಗಣೇಶ ಎಂದು ಗುರುತಿಸಲಾಗಿದೆ. ಸಿದಾರ್ಥ, ಭೀಮರೆಡ್ಡಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರೆಲ್ಲಾ ರಾಯಚೂರಿನ ನವೋದಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿಗಳು ಎನ್ನಲಾಗುತ್ತಿದೆ. ಮೃತರು ಹಾಗೂ ಗಾಯಗೊಂಡವರು ಒಂದೇ ಕಾರಿನಲ್ಲಿದ್ದರು.
ಯರಗೇರಾದಿಂದ ಬರುತ್ತಿದ್ದ ಕಾರು ಮತ್ತು ರಾಯಚೂರಿನಿಂದ ಹೋಗುತ್ತಿದ್ದ ಕಾರಿಗಳೆರಡರ ಮಧ್ಯೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಯರಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








