ಬೆಂಗಳೂರು:
ಕೆಆರ್ ಎಸ್ ಅನ್ನು ಅಮೆರಿಕದ ಡಿಸ್ನಿಲ್ಯಾಂಡ್‌ನಂತೆ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಅಲ್ಲಿ ಕಾವೇರಿ ತಾಯಿಯ 350 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಹಗಲಿನಲ್ಲಿ ಮನಮೋಹಕ ಪರಿಸರ, ಸಂಜೆ ವೇಳೆ ಬೆಳಕಿನ ರಂಗು ಪಡೆದುಕೊಂಡು ಪ್ರವಾಸಿಗರನ್ನು ಸೆಳೆಯುತ್ತಿರುವ ಮಂಡ್ಯದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯ ಮತ್ತಷ್ಟು ಕಂಗೊಳಿಸಲಿದೆ.
ಕಾವೇರಿ ತಾಯಿಯ 350 ಅಡಿ ಪ್ರತಿಮೆಗೆ 125 ಅಡಿ ಎತ್ತರದ ನೆಲಗಟ್ಟು ಇರಲಿದ್ದು, ಸಾರ್ವಜನಿಕರು ಅಣೆಕಟ್ಟು ವೀಕ್ಷಿಸುವ ಗ್ಯಾಲರಿಯಲ್ಲಿ ಇದನ್ನು ನಿರ್ಮಿಸಲಾಗುವುದು.
ಕನ್ನಡಿಗರ ಭಾವನಾತ್ಮಕತೆಯ ಪ್ರತೀಕವಾಗಿರುವ ಕಾವೇರಿ ತಾಯಿಯನ್ನು ಈ ಪ್ರತಿಮೆಯ ರೂಪದಲ್ಲಿ ಕಾಣಲಾಗುತ್ತಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ಹೊಸ ಯೋಜನೆಗೆ ಮುಂದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
